Breaking News

ಕೇರಳ ಸಿಎಂ ಭೇಟಿ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣವಾಗುತ್ತದೆ: ಬಿಜೆಪಿ


ಮಂಗಳೂರು : ಫೆಬ್ರವರಿ 25 ರಂದು  ಸಿಪಿಎಂ ಸಾಮರಸ್ಯ ರ್ಯಾಲಿಯಲ್ಲಿ ಭಾಗವಹಿಸಲು  ನಗರಕ್ಕೆ ಆಗಮಿಸುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ  ವಿಜಯನ್  ಭಾಗವಹಿಸುವಿಕೆ ಜಿಲ್ಲೆಯಲ್ಲಿ ರಾಜಕೀಯ ಅಶಾಂತಿಗೆ  ಕಾರಣವಾಗುತ್ತದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠ೦ದೂರು ಹೇಳಿದರು .

ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದ  ಸಂಜೀವ ಮಠ೦ದೂರು ದಕ್ಷಿಣ ಕನ್ನಡ ಜಿಲ್ಲೆ ರಾಜಕೀಯ ಸಾಮರಸ್ಯಕ್ಕೆ  ಸಾಕ್ಷಿಯಾಗಿದೆ ಇಲ್ಲಿ ಚುನಾವಣೆಗಳು  ಪ್ರತಿಸ್ಪರ್ಧಿಗಳೊಂದಿಗೆ  ಹೋರಾಡಿ ಸಾಮರಸ್ಯದಿಂದ ನಡೆಯುತ್ತದೆ .ಆದರೆ   ಕೇರಳ ಅನೇಕ ರಾಜಕೀಯ ಹತ್ಯೆಗಳಿಗೆ  ಸಾಕ್ಷಿಯಾದ ಒಂದು ರಾಜ್ಯವಾಗಿದೆ.ಕೇರಳ ಮುಖ್ಯಮಂತ್ರಿ ಪಿಣರಾಯಿ  ವಿಜಯನ್ ಅವರ ನೇತೃತ್ವದ  ಸಿಪಿಎಂ  ಕ್ರೂರತನದ ರಾಜಕೀಯಕ್ಕೆ ಸಂಘ ಪರಿವಾರ ಮತ್ತು ಬಿಜೆಪಿಯ ಹಲವಾರು ಅಮಾಯಕರು ಬಲಿಯಾಗಿದ್ದಾರೆ .ಅದಲ್ಲದೆ ಕಾಂಗ್ರೆಸ್ , ಎಸ್ಡಿಪಿಐ,ಅವರ ಕಾರ್ಯಕರ್ತರು ಕೂಡ ಸಿಪಿಎಂ ಸಂಚಿಗೆ ಬಲಿಯಾಗಿದ್ದಾರೆ.

ಇಷ್ಟೆಲ್ಲಾ ಹಿನ್ನಲೆ ಹೊಂದಿರುವ  ಹೊರತಾಗಿಯೂ, ವಿಜಯನ್ ಕೋಮು ಸಾಮರಸ್ಯ ಕಾರ್ಯಕ್ರಮಕ್ಕೆ  ಹಾಜರಾಗಲು ನಮ್ಮ ಜಿಲ್ಲೆಗೆ ಬರುತ್ತಾರೆ ಎಂಬುವುದು ವಿಷಾಧನೀಯ,ಕೇರಳ ಮುಖ್ಯ ಮಂತ್ರಿ ಆಗಮನವನ್ನು ಖಂಡಿಸಿ ಫೆಬ್ರವರಿ 25 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದಾರೆ .ಈ ಬಂದ್ಗೆ ದಕ್ಷಿಣ ಕನ್ನಡ ಬಿಜೆಪಿ  ತನ್ನ ಸಂಪೂರ್ಣ ಬೆಂಬಲ ವಿಸ್ತರಿಸುತ್ತದೆ ಮತ್ತು ಫೆಬ್ರವರಿ 24 ರಂದು ಬೆಳಗ್ಗೆ ೧೦ ಕ್ಕೆ   ಡಾ ಅಂಬೇಡ್ಕರ್ ವೃತ್ತದಿಂದ  ನೆಹರೂ ಮೈದಾನದವರೆಗೆ  ರ್ಯಾಲಿ ಮಾಡಲಾಗವುದು ಎಂದು ಹೇಳಿದರು .
ಸುದ್ದಿಗೋಷ್ಠಿಯಲ್ಲಿ  ಮಾಜಿ ಶಾಸಕ ಯೋಗೀಶ್ ಭಟ್, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಶೋಕ್ ರೈ ಉಪಸ್ಥಿತರಿದ್ದರು.
loading...

No comments