ಶಶಿಕಲಾ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಪನ್ನೀರ್ಸೆಲ್ವಂ
ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಮೊಸಳೆ ಕಣ್ಣೀರು ಸುರಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಕಿಡಿಕಾರಿದರು.
ಇದಕ್ಕೂ ಮೊದಲು ಶಶಿಕಲಾ ಅವರು ಪತ್ರಿಕಾಗೋಷ್ಠಿ ನಡೆಸಿ, ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಶಿರ್ವಾದ ನಮ್ಮ ಮೇಲಿದೆ. ರಾಜ್ಯದಲ್ಲಿ ಪಕ್ಷ ರಚನೆ ಮಾಡಿ ನಂತರ ಅಮ್ಮನವರ ಸಮಾಧಿಗೆ ತೆರಳಿ ಅಲ್ಲಿ ಭಾವಚಿತ್ರ ತೆಗೆಸಿಕೊಂಡು ವಿಶ್ವದ ಮುಂದೆ ನಮ್ಮ ಜಯ ಪ್ರಸ್ತುತಪಡಿಸುತ್ತೇವೆ ಎಂದು ಹೇಳುತ್ತ ಭಾವುಕರಾಗಿ ಕಣ್ಣೀರು ಹರಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಮಾಧ್ಯಮದ ಮುಂದೆ ಕಾಣಿಸಿಕೊಂಡ ಒಪಿಎಸ್, ಜನತೆಯ ದಿಕ್ಕು ತಪ್ಪಿಸುವ ಕಾರ್ಯಕ್ಕೆ ಶಶಿಕಲಾ ಅವರು ಮುಂದಾಗಿದ್ದಾರೆ.
ಗೋಲ್ಡನ್ ರೆಸಾರ್ಟ್ನಲ್ಲಿ ಬಂಧಿಯಾಗಿರುವ ಶಾಸಕರಿಗೆ ದಿಗ್ಭಂಧನ ವಿಧಿಸಿದ್ದಾರೆ. ಪ್ರತಿ ಶಾಸಕರ ಮೇಲೆ ನಿಗಾ ಇರಿಸಲು ತಲಾ ನಾಲ್ಕು ರೌಡಿಗಳನ್ನು ನೇಮಿಸಿದ್ದಾರೆ ಎಂದರು.
ಮಹಿಳೆಯರು ರಾಜಕೀಯದಲ್ಲಿ ನೆಲೆಯೂರುವುದು ಕಷ್ಟ ಎಂದಿರುವ ಶಶಿಕಲಾ ಅವರು, 'ಅಮ್ಮ'ನವರ ಆಡಳಿತ ವೈಖರಿ ತಿಳಿಯದಂತೆ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಹರಿಹಾಯ್ದರು.
loading...
No comments