Breaking News

ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೈತಿಕ ಚಟುವಟಿಕೆ


ಮಂಗಳೂರು:- ರಾಜ್ಯದ ಪ್ರಮುಖ ನಗರದಲ್ಲಿ ಮಂಗಳೂರು ಕೂಡ ಒಂದು ಕೈಗಾರಿಕಾ, ಕೃಷಿ, ವಾಣಿಜ್ಯ ಹೀಗೆ ಎಲ್ಲ‌ ಬಾಗದಲ್ಲಿ ಹೆಸರು ಮಾಡಿರುವ ಜಿಲ್ಲೆ ಮಂಗಳೂರು ಅದರಲ್ಲೂ ಕೋಮು ಸೂಕ್ಮ‌ ಪ್ರದೇಶ.

ಆದರೆ ಇದೇ ಮಂಗಳೂರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾನ ಹಾರಜು ಹಾಕಿ ಕೊಳ್ಳುವ ಹಂತಕ್ಕೆ ಬಂದಿದೆ ಕಾರಣ ಮಂಗಳೂರು ನಂತೂರಿನಿಂದ ಹಿಡಿದು‌ ಪಡುಬಿದ್ರೆ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೈತಿಕ ಚಟುವಟಿಕೆ ಅಂದರೆ ವೈಶ್ಯಾವಾಟಿಕೆ ಹಾಡುಹಗಲೆ ಎಗ್ಗಿಲ್ಲದೆ ಸಾಗುತ್ತಾ ಇದೆ ರಸ್ತೆ ಬದಿಯಲ್ಲಿ ಕಾರುಗಳನ್ನು ನಿಲ್ಲಿಸಿ ಅದರಲ್ಲಿ ರಾಸಲಿಲೆ ನಡೆಯುತ್ತಾ ಇರುವ ಬಗ್ಗೆ ವರದಿಯಾಗಿದೆ. ಆದರೆ ಅದೇ ರಸ್ತೆಯಲ್ಲಿ ಸಂಚರಿಸುವ ಪೋಲಿಸರು ಮಾತ್ರ ಇದನ್ನೆಲ್ಲ ಕಂಡು ಮೌನಕ್ಕೆ ಶರಣಾಗಿದ್ದಾರೆ .

ಇತ್ತ ಈ ಅನೈತಿಕ ಚಟುವಟಿಕೆಯಿಂದ ಸಾರ್ವಜನಿಕರು ಸಂಚರಿಸಲು ಮುಜುಗರ ಅನುಭವಿಸುತ್ತಾ ಇದ್ದು ಹಲವಾರು ಯುವತಿಯರ ಮೇಲೆ‌ ಲೈಂಗಿಕ ಕಿರುಕುಳ ನಡೆದಿದೆ ಅನ್ನುವ ಮಾತುಗಳು ಕೇಳಿ ಬರುತ್ತಾ ಇವೆ.

ರಾಜರೋಷವಾಗಿ ಇಷ್ಟೆಲ್ಲಾ ನಡೆಯುತ್ತಾ ಇದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ .

ಸಾರ್ವಜನಿಕರು ರೊಚ್ಚಿಗೆದ್ದು ಕಾನೂನು ಕೈಗೆ ತೆಗೆದುಕೊಳ್ಳುವ ಮೊದಲು ಸಂಭಂದ ಪಟ್ಟವರು ಇದರ ಬಗ್ಗೆ ಗಮನ ಹರಿಸಿ ಮುಂದೆ ನಡೆಯಬಹುದಾದ ಬಾರಿ ಅನಾಹುತ ತಪ್ಪಿಸಬಹುದಾಗಿದೆ.


loading...

No comments