ವಾಹನ ಕಾಯ್ದೆಗೆ ಕೇಂದ್ರ ತಿದ್ದುಪಡಿಗೆ ರೈ ವಿರೋಧ
ಬಂಟ್ವಾಳ : ಪ್ರತಿ ಹಂತದಲ್ಲೂ ಬಡವರ ಮೇಲೆ ಗದಾಪ್ರಹಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಮೋಟಾರು ವಾಹನ ಕಾಯ್ದೆಗೆ ಪರಿಷ್ಕರಣೆ ತರಲು ಹೊರಟಿದ್ದು, ಇದೂ ಕೂಡಾ ದುಡಿದು ತಿನ್ನುವ ಬಡ ವರ್ಗದ ಮೇಲೆ ಗಾಯದ ಮೇಲೆ ಬರೆ ಎಳೆಯುವ ಪ್ರಯತ್ನವಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದ ವಿರುದ್ದ ಬಂಟ್ವಾಳ, ಪಾಣೆಮಂಗಳೂರು ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಬಿ ಸಿ ರೋಡು ಪೇಟೆಯಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಷ್ಕøತ ಮೋಟಾರು ವಾಹನ ಕಾಯ್ದೆಯಿಂದಾಗಿ ಎಲ್ಲಾ ವಿಧದ ಶುಲ್ಕಗಳನ್ನು ದುಪ್ಪಟ್ಟುಗೊಳಿಸಲಾಗುತ್ತಿದ್ದು, ಇದು ದುಡಿದು ತಿನ್ನುವ ಬಡ ಕಾರ್ಮಿಕರ ಪಾಲಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಲಿದೆ. ಪ್ರಭಾವಿಗಳು ತಮ್ಮ ಪ್ರಭಾವದಿಂದ ದಂಡ ಮೊದಲಾದ ಶುಲ್ಕಗಳಿಂದ ಸುಲಭವಾಗಿ ಪಾರಾದರೆ, ಬಡ ವರ್ಗದ ಮಂದಿ ಮಾತ್ರ ಕಾನೂನಿನ ಕುಣಿಕೆಗೆ ಸಿಲುಕಿ ನರಳುವಂತಾಗಲಿದೆ” ಎಂದರು.
loading...
No comments