ಕಮ್ಮನಹಳ್ಳಿ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೆ ಯುವತಿಯ ಮೇಲೆ ಲೈಂಗಿಕ ಕಿರುಕುಳ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ ಮುಂದುವರೆದಿದೆ. ಹೊಸ ವರ್ಷದಂದು ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಘಟನೆಯಿಂದಾಗಿ ಯುವತಿಯರಿಗೆ ರಾತ್ರಿ ಹೊತ್ತು ಹೊರಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಅಂತಹುದೇ ಮತ್ತೊಂದು ಪ್ರಕರಣ ಹೆಚ್.ಬಿ.ಆರ್ ಲೇಔಟ್ ನಲ್ಲಿ ನಡೆದಿದೆ.
ಭಾನುವಾರ ರಾತ್ರಿ ಹೆಚ್.ಬಿ.ಆರ್ ಲೇಔಟ್ ನ ಫರಾಟಾಸ್ ಅಂಡ್ ದೋಸಾಸ್ ಹೋಟೇಲ್ ನಲ್ಲಿ ಊಟ ಮುಗಿಸಿ ತನ್ನ ಗೆಳೆಯನೊಂದಿಗೆ ನಡೆದುಕೊಂಡು ವಾಪಾಸಾಗುತ್ತಿದ್ದ ಯುವತಿಯೋರ್ವಳಿಗೆ ಎರಡು ಬೈಕಿನಿಂದ ಬಂದ ದುಷ್ಕರ್ಮಿಗಳು ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿರಿಸಿದ್ದಾರೆ. ದುಷ್ಕರ್ಮಿಗಳ ಧಾಳಿಗೆ ಓಳಗಾದ ಯುವತಿ ಕಿರುಚಿಕೊಂಡಿದ್ದಲ್ಲದೆ ಜೊತೆಗಿದ್ದ ಗೆಳೆಯ ಕೂಡ ದುಷ್ಕರ್ಮಿಗಳನ್ನು ತಡೆದಿದ್ದಾನೆ. ಈ ಸಂದರ್ಭದಲ್ಲಿ ಹೆದರಿದ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಎರಡು ಬೈಕ್ ಗಳಿಂದ ಆಗಮಿಸಿದ್ದ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
loading...
No comments