Breaking News

ಕಾಲೇಜ್ ಕ್ಯಾಂಪಸ್'ನಲ್ಲಿ ಎಸ್.ಎಫ್.ಐ ಕಾರ್ಯಕರ್ತರಿಂದ ನೈತಿಕ ಪೋಲೀಸ್ ಗಿರಿ.

ತಿರುವನಂತಪುರ : ಕೇರಳದ ತಿರುವನಂತಪುರ ವಿಶ್ವವಿದ್ಯಾನಿಲಯದಲ್ಲಿ ಎಸ್.ಎಫ್.ಐ (ಸ್ಟೂಡಂಟ್ ಫೆಡರೇಶನ್ ಆಫ್ ಇಂಡಿಯಾ) ಕಾರ್ಯಕರ್ತರು ನೈತಿಕ ಪೋಲೀಸ್ ಗಿರಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಗೆ ಸೇರಿದ ಮೂವರು ಕಾರ್ಯಕರ್ತರು ಅದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಅವರ ಗೆಳೆಯನ ಮೇಲೆ ಹಲ್ಲೆ ನಡೆಸಿದ್ದಾರೆ.
ಕಾಲೇಜಿನಲ್ಲಿ ಸಂಜೆ ನಡೆಯಲಿದ್ದ ಯಾವುದೋ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿನಿಯರು ತಮ್ಮ ಗೆಳೆಯ ಜಿತೇಶ್'ನನ್ನು ಕರೆದುಕೊಂಡು ಕಾಲೇಜು ಕ್ಯಾಪಸ್ ಗೆ ಬಂದಿದ್ದರು. ಈ ಸಂಧರ್ಬದಲ್ಲಿ ವಿದ್ಯಾರ್ಥಿನಿಯರ ಪಕ್ಕದಲ್ಲಿ ಕುಳಿತುಕೊಂಡು ಜಿತೇಶ್ ಮಾತನಾಡುತ್ತಿರುವುದನ್ನು ಎಸ್.ಎಫ್.ಐ ಸಂಘಟನೆ ಕಾರ್ಯಕರ್ತರು ಆಕ್ಷೇಪಿಸಿದ್ದು ಜಿತೇಶ್ ಹಾಗೂ ವಿದ್ಯಾರ್ಥಿನಿಯರಿಗೆ ಥಳಿಸಿದ್ದಾರೆ , ಇಷ್ಟೇ ಅಲ್ಲದೆ ವಿದ್ಯಾರ್ಥಿನಿಯರಿಗೆ ದೈಹಿಕ ಹಿಂಸೆ ನೀಡಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿನಿಯರಾದ ಆಸ್ಮಿತ ಕಬೀರ್ ಮತ್ತು ಸೂರ್ಯ ಗಾಯತ್ರಿ ಹಾಗೂ ಅವರ ಗೆಳೆಯ ಜಿತೇಶ್ ಮೂವರು ಜಂಟಿಯಾಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಿತೇಶ್ ಮಲಯಾಳಂ ಸಿನಿಮಾ ಉದ್ಯಮದಲ್ಲಿ ಕೆಲಸಮಾಡುತ್ತಿದ್ದು, ಸೂರ್ಯ ಎರಡನೇ ವರ್ಷದ ತತ್ವಶಾಸ್ತ್ರ ಅಧ್ಯಯನ ಮಾಡುತ್ತಿದ್ದರೆ, ಆಸ್ಮಿತಾ ಮಲಯಾಳಂ ಅಂತಿಮ ವರ್ಷದ ವಿದ್ಯಾರ್ಥಿನಿ.ಇದರಲ್ಲಿ ಸೂರ್ಯ ಗಾಯತ್ರಿ ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯ ಮಾಜಿ ಕಾರ್ಯಕರ್ತೆ.
"ಕಾಲೇಜು ಕ್ಯಾಂಪಸ್ ಹೊರೆಗೆ ನೈತಿಕ ಪೋಲೀಸ್ ಗಿರಿ ಕುರಿತು ಉಪದೇಶ ನೀಡುವ ನೀವು ಕಾಲೇಜು ಕ್ಯಾಪಸ್'ನಲ್ಲಿ ಮಾಡುತ್ತಿರುವುದೇನು" ಎಂದು ಸೂರ್ಯ ಗಾಯತ್ರಿ ಕೇಳಿದ್ದೇ ಅವರು ನಮ್ಮ ಮೇಲೆ ಹಲ್ಲೆ ಮಾಡಲು ಕಾರಣವಿರಬಹುದು ಎಂದು ಹಲ್ಲೆಗೊಳಗಾದ ವಿದ್ಯಾರ್ಥಿನಿ ಆಸ್ಮಿತಾ ಅಭಿಪ್ರಾಯ. 
loading...

No comments