ಯಡಿಯೂರಪ್ಪ ಮಹಾ ಭಂಡ : ಸಿದ್ದರಾಮಯ್ಯ ಹೇಳಿಕೆ
ಮೈಸೂರು : ತಮ್ಮ ವಿರುದ್ದ ಯಾವುದೇ ದಾಖಲೆಗಳನ್ನು ಒದಗಿಸದೆ ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಗೆ ಸಾವಿರ ಕೋಟಿ ನೀಡಿದ ಆರೋಪಗಳನ್ನು ಮಾಡುತ್ತಿರುವ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಇಂದು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿಮಾಡದ ಪತ್ರಕರ್ತರಲ್ಲಿ "ಬಿ.ಎಸ್ ಯಡಿಯೂರಪ್ಪ ಭಂಡರಲ್ಲಿ ಮಹಾ ಭಂಡ" ಎಂದು ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ, ಹಲವು ಹಗರಣಗಲ್ಲಿ ಭಾಗಿಯಾಗಿರುವ ಯಡಿಯೂರಪ್ಪ ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲದೆ ಹೋಗಿದ್ದರೆ ಜೈಲಿನಲ್ಲಿ ಇರುತ್ತಿದ್ದರು. ಕೇಂದ್ರ ಸರ್ಕಾರದ ಸಹಾಯದಿಂದ ಯಡಿಯೂರಪ್ಪ ತಮ್ಮ ಮೇಲಿರುವ ಒಂದೊಂದೇ ಪ್ರಕರಣಗಳನ್ನು ವಜಾ ಮಾಡಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋಗಿ ಬಂದವರಿಂದ ಬುದ್ಧಿವಾದ ಹೇಳಿಸುಕೊಳ್ಳುವ ಅಗತ್ಯ ತಮಗಿಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
loading...
No comments