Breaking News

ಯೋಧರಿಗೆ ನೀಡುವ ಆಹಾರ ಕಳಪೆಯಾಗಿದೆ ಎಂದು ಆರೋಪ ಮಾಡಿದ್ದ ತೇಜ್ ಬಹದ್ದೂರ್ ಕಾಣೆಯಾಗಿದ್ದಾರೆ.

ನವದೆಹಲಿ : ಭಾರತೀಯ ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಕಾಣೆಯಾಗಿದ್ದಾರೆ ಎಂದು ಆತನ ಹೆಂಡತಿ ದೆಹಲಿ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ತೇಜ್ ಬಹದ್ದೂರ್ ಹೆಂಡತಿ ನೀಡಿರುವ ದೂರಿನ ಅರ್ಜಿಯನ್ನು ತ್ವರಿತ ರೀತಿಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಇಂದು ಆದೇಶಿಸಿದೆ.

ಯೋಧ ತೇಜ್ ಬಹದ್ದೂರ್ ಮಡದಿ ಶರ್ಮಿಲ ಯಾದವ್ ನೀಡಿದ ದೂರಿನಂತೆ "ತನ್ನ ಗಂಡ ತೇಜ್ ಬಹದ್ದೂರ್'ನೊಂದಿಗೆ ಕಳೆದ ಮೂರು ದಿನಗಳಿಂದ ಪೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಆತ ನಮ್ಮ ಪೋನ್ ಕರೆಗೆ ಸಿಗುತ್ತಿಲ್ಲ. ಈ ಬಗ್ಗೆ ಸೇನೆಗೆ ಮೂರು ಪತ್ರ ಬರೆದಿದ್ದು ಅದಕ್ಕೂ ಸೇನೆಯಿಂದ ಉತ್ತರ ಸಿಕ್ಕಿಲ್ಲ" ಎಂದಿದ್ದಾರೆ.

ತಾನು ಕಳೆದ ಫೆಬ್ರವರಿ 7ರಂದು ಕಡೆಯದಾಗಿ ಪೋನ್ ಮೂಲಕ ಮಾತನಾಡಿದ್ದೇನೆ. ಈಗ ಕರೆಮಾಡಿದರೆ ಅದನ್ನು ಯಾರು ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ. ಯೋಧ ತೇಜ್ ಬಹದ್ದೂರ್ ಬಾವ ವಿಜಯ್ ಕರೆ ಮಾಡಿದಾಗಲೂ ಸೇನೆಯ ಅಧಿಕಾರಿಗಳು ಕರೆಯನ್ನು ತೇಜ್ ಬಹದ್ದೂರ್ ಮೊಬೈಲ್ ಗೆ ಸಂಪರ್ಕ ಮಾಡದೆ ಹಿಡಿದಿಟ್ಟು ಕೊಳ್ಳುತ್ತಾರೆ ಎಂದಿದ್ದಾರೆ.

ಆದರೆ ಬಿಎಸ್ಎಫ್ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು ತೇಜ್ ಬಹದ್ದೂರ್ ಹೆಂಡತಿ ಮತ್ತು ತಮ್ಮ ಗುರುವಾರ 6:40 ರಿಂದ 6:46 ರವರೆಗೆ ತೇಜ್ ಬಹದ್ದೂರ್ ನೊಂದಿಗೆ ಮಾತನಾಡಿದ್ದಾರೆ. ಈ ಕುರಿತ ದಾಖಲೆಗಳು ಫೋನ್ ಕರೆಗಳ ರೆಕಾರ್ಡ್ ನಮ್ಮ ಬಳಿ ಇದೆ ಎಂದಿದ್ದಾರೆ.
loading...

No comments