ಟೆಸ್ಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ ತಂಡ.
ಹೈದ್ರಾಬಾದ್ : ಭಾರತೀಯ ತಂಡ ಸತತ ಮೂರನೇ ಬಾರಿಗೆ ಇನ್ನಿಂಗ್ಸ್'ನಲ್ಲಿ 600+ ರನ್ ದಾಖಲಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಹೈದ್ರಾಬಾದ್'ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದ್ವಿಶತಕದ ನೆರವಿನೊಂದಿಗೆ ಭಾರತೀಯ ತಂಡ 6ವಿಕೆಟ್ ಕಳೆದುಕೊಂಡು 687ರನ್ ದಾಖಲಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಈ ಹಿಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡ ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ 631ರನ್ ಹಾಗೂ ಚೆನ್ನೈನ ಪಂದ್ಯದಲ್ಲಿ ತಂಡದ ಸರ್ವಶ್ರೇಷ್ಠ 759/7dರನ್ ದಾಖಲಿಸಿತ್ತು.ಇದುವರೆಗೆ ಯಾವುದೇ ತಂಡ ಸತತವಾಗಿ ಮೂರು ಬಾರಿ 600+ ರನ್ ದಾಖಲಿಸಿಲ್ಲ.
loading...
No comments