Breaking News

ವಾಷಿಂಗ್ ಮಶೀನಿನಲ್ಲಿ ಮುಳುಗಿ ಅವಳಿ ಮಕ್ಕಳು ಮೃತ


ನವದೆಹಲಿ : ಇಲ್ಲಿನ ರೋಹಿಣಿ ಪ್ರದೇಶದ ನಿವಾಸಿಯಾಗಿರುವ ಮಹಿಳೆಯೊಬ್ಬಳು ಶನಿವಾರ ಡಿಟರ್ಜಂಟ್ ಪೌಡರ್ ಖರೀದಿಸಲೆಂದು ಮನೆ ಪಕ್ಕದ ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ವಾಷಿಂಗ್ ಮಶೀನಿನೊಳಗೆ ಪ್ರವೇಶಿಸಿದ ಆಕೆಯ 3 ವರ್ಷದ ಅವಳಿ ಗಂಡು ಮಕ್ಕಳು ಅದರಲ್ಲಿದ್ದ ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಮಕ್ಕಳಾದ ನಕ್ಷ್ ಮತ್ತು ನೀಶೂ ಅವರು  ಟಾಪ್ ಲೋಡಿಂಗ್ ವಾಷಿಂಗ್ ಮಶೀನಿನೊಳಗೆ ಪ್ರವೇಶಿಸಿ ಅದರ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ  ಸುಮಾರು ಅರ್ಧ ಗಂಟೆಯ ನಂತರವಷ್ಟೇ  ಅವರ ಹೆತ್ತವರಿಗೆ ಈ ದುರಂತದ ಬಗ್ಗೆ ತಿಳಿದುಬಂದಿತ್ತು.

ವಾಷಿಂಗ್ ಮಶೀನಿನ ಟಬ್ಬಿನಿಳಗೆ ಸುಮಾರು 15 ಲೀಟರ್ ನೀರಿತ್ತು. ವಾಷಿಂಗ್ ಮಶೀನಿನ ಎದುರಿನಲ್ಲಿ ತಾಯಿ ಒಗೆಯಲೆಂದು ರಾಶಿ ಹಾಕಿದ ಬಟ್ಟೆಗಳನ್ನೇರಿ ಮಕ್ಕಳು ಮಶೀನಿನೊಳಗೆ ಪ್ರವೇಶಿಸಿರಬೇಕೆಂದು ಶಂಕಿಸಲಾಗಿದೆ. ಅಂಗಡಿಗೆ ಹೋಗಿದ್ದ ಮಹಿಳೆ ಮನೆಗೆ ಹಿಂದಿರುಗುತ್ತಿದ್ದಂತೆಯೇ ಮಕ್ಕಳು ಕಾಣಿಸಿದೇ ಇರುವುದನ್ನು ಕಂಡು ಕಂಗಾಲಾಗಿ ಎಲ್ಲೆಡೆ ಹುಡುಕಿದರೂ ಪ್ರಯೋಜನವಾಗದೇ ಇದ್ದಾಗ ವಿಮಾ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಪತಿಗೆ ಮಾಹಿತಿ ನೀಡಿದ್ದಳು. ಆತ ಮನೆಗೆ ಬಂದ ನಂತರವಷ್ಟೇ ಮಕ್ಕಳು ವಾಷಿಂಗ್ ಮಶೀನಿನೊಳಗಿರುವುದು ಪತ್ತೆಯಾಗಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ani

loading...

No comments