ಉಗ್ರ ಮಸೂದ್ ಅನ್ನು ಬ್ಯಾನ್ ಮಾಡಿ ಎಂದ ಅಮೇರಿಕಾ
ಅಮೇರಿಕಾ :ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಉಗ್ರನೆಂದು ಘೋಷಿಸಬೇಕು ಎಂದು ಭಾರತ ಹಲವು ಬಾರಿ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿತ್ತು ಇದೀಗ ಅಮೇರಿಕಾ ಕೂಡ ಮಸೂದ್ ಅನ್ನು ಉಗ್ರ ಎಂದು ಘೋಷಣೆ ಮಾಡಲು ವಿಶ್ವ ಸಂಸ್ಥೆಯಲ್ಲಿ ಬೆಂಬಲ ಸೂಚಿಸಿದೆ
ಆದರೆ ಚೀನಾ ಮಾತ್ರ ಈ ನಿಲುವಿಗೆ ವಿರೋಧ ವ್ಯಕ್ತ ಪಡಿಸಿದೆ .ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ಯುಕೆ ಮತ್ತು ಫ್ರಾನ್ಸ್ ಬೆಂಬಲದೊಂದಿಗೆ ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಿದೆ. ಅಮೆರಿಕ ಮತ್ತು ಭಾರತದ ನಡುವಣ ಸಮಾಲೋಚನೆಗಳ ಬಳಿಕ ಈ ಪ್ರಸ್ತಾವವನ್ನು ಅಂತಿಮಗೊಳಿಸಲಾಗಿದೆ. ಜೈಶೆ ಮೊಹಮ್ಮದ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿ ಅದರ ನಾಯಕರನ್ನು ಬಂಧಿಸಬೇಕೆಂದು ನಿರ್ಣಯದಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಚೀನಾ ಎಂದಿನಂತೆ ಇದನ್ನು ವಿರೋಧಿಸಿದೆ ಎಂದು ಹೇಳಲಾಗಿದೆ
ನಿಷೇಧ ಪ್ರಸ್ತಾವಕ್ಕೆ ಅಡ್ಡಿಯುಂಟುಮಾಡುವ ಚೀನಾದ ಕ್ರಮವನ್ನು ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. 'ಈ ಬೆಳವಣಿಗೆ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಚೀನಾ ಸರಕಾರದ ಜತೆ ಚರ್ಚಿಸುತ್ತೇವೆ' ಎಂದು ಹೇಳಿದೆ.
loading...
No comments