Breaking News

ಟ್ವೆಂಟಿ20 ಪಂದ್ಯಾವಳಿಯಲ್ಲಿ ದಾಖಲೆಯ 300ರನ್ ಭಾರಿಸಿದ ದೆಹಲಿ ರಣಜಿ ಆಟಗಾರ.

ದೆಹಲಿ :​ ದಿಲ್ಲಿ ರಣಜಿ ತಂಡದಲ್ಲಿ ಆಡುವ 21ವರ್ಷದ ಕ್ರಿಕೆಟ್ ಆಟಗಾರ ಮೋಹಿತ್ ಅಹಲಾವತ್ ಇಂದು ಟ್ವೆಂಟಿ20 ಪಂದ್ಯವೊಂದರಲ್ಲಿ 300ರನ್ ಭಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ದಿಲ್ಲಿಯಲ್ಲಿ ನಡೆದ ಸ್ಥಳೀಯ ಟಿ20 ಪಂದ್ಯಾವಳಿಯೊಂದರಲ್ಲಿ ಮೋಹಿತ್ ಈ ದಾಖಲೆ ಬರೆದಿದ್ದು ತಾನು ಆಡಿದ 72ಬಾಲ್ ಗೆ 300ರನ್ ಭಾರಿಸಿ ಅಜೇಯರಾಗಿಯೆ ಉಳಿದಿದ್ದಾನೆ.
ತಾನು ಆಡಿದ 72 ಎಸೆತಗಳಲ್ಲಿ 39ಸಿಕ್ಸರ್ (234ರನ್)  ಮತ್ತು 14ಬೌಂಡರಿಗಳ (56ರನ್) ಭಾರಿಸಿದ್ದಾನೆ. ಪೂರ್ವ ದೆಹಲಿಯ ಲಲಿತ ಪಾರ್ಕ್ ನಲ್ಲಿ ಆಡಲಾದ ಈ ಟಿ20 ಟೂರ್ನಮೆಂಟಿನಲ್ಲಿ ಮೋಹಿತ್ 'ಮಾವಿ ಎಲೆವೆನ್' ಪರ ಆಡಿದ್ದು ತನ್ನ ದಾಖಲೆಯ 300ರನ್ ಗಳ ನೆರವಿನಿಂದ ಆತನ ತಂಡ 'ಫ್ರೆಂಡ್ಸ್ ಎಲೆವೆನ್' ತಂಡದ ಎದುರು 20ಓವರ್ ಗಳಲ್ಲಿ 416ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. 
ಟಿ20 ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅತೀ ಹೆಚ್ಚು ರನ್ ದಾಖಲಿಸಿದ ದಾಖಲೆ ವೆಸ್ಟ್ ಇಂಡೀಸ್'ನ ಕ್ರಿಸ್ ಗೇಲ್ ಅವರದ್ದಾಗಿದ್ದು ಐಪಿಎಲ್ ನಲ್ಲಿ ವಾರಿಯರ್ಸ್ ವಿರುದ್ಧ 175ರನ್'ಗಳ ದಾಖಲೆ ಆಟ ಆಡಿದ್ದಾರೆ.
loading...

No comments