Breaking News

ನೇತ್ರಾವತಿ ಉಳಿಸಲು ಆಮರಣಾಂತ ಉಪವಾಸ


ಮಂಗಳೂರು : ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ವಿರುದ್ಧ ಇದೀಗ ಪ್ರತಿಭಟನೆ ಮತ್ತೆ ತೀವ್ರಗೊಳ್ಳುತ್ತಿದೆ. ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಪದಾಧಿಕಾರಿಗಳು ಫೆ 10ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಗೊಳ್ಳುವುದು ಖಚಿತ ಎಂದು ಹೇಳಿದ್ದಾರೆ. ಅಂದು ಬೆಳಿಗ್ಗೆ 9.30ಕ್ಕೆ ಪುರಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಗೊಳ್ಳಲಿದೆ ಎಂದರು.

ಇದು ರಾಜಕೀಯರಹಿತವಾದ ಹೋರಾಟ. ಪಕ್ಷಾತೀತವಾಗಿ, ಧರ್ಮಾತೀತವಾಗಿ ನಡೆಯುವ ಹೋರಾಟ ಇದಾಗಿದ್ದು, ಎಲ್ಲಾ ಧರ್ಮ, ಸಮುದಾಯದ, ರಾಜಕೀಯ ಮುಖಂಡರು, ಧರ್ಮಗುರುಗಳು, ಕಾರ್ಮಿಕ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.

ಪ್ರಸ್ತಾವಿತ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸಬೇಕು. ಅಲ್ಲಿಯ ತನಕ ಕಾಮಗಾರಿ ಸ್ಥಗಿತಗೊಳಿಸಬೇಕು. ನಮ್ಮ ಹೋರಾಟಕ್ಕೆ ಸರಕಾರ ಏನಾದರೂ ಬಲ ಪ್ರಯೋಗಿಸಿದಲ್ಲಿ ನಾವು ಜಿಲ್ಲಾ ಬಂದ್ ಕರೆ ನೀಡುವೆವು ಎಂದವರು ಎಚ್ಚರಿಸಿದರು.

ಈ ಸಂದರ್ಭ ಮುಖಂಡರಾದ ಎಂ ಜಿ ಹೆಗಡೆ, ಹನೀಫ್ ಖಾನ್ ಕೊಡಾಜೆ, ಗಣೇಶ್ ರಾವ್, ಶಶಿರಾಜ್ ಶೆಟ್ಟಿ ಕೊಳಂಬೆ ಮೊದಲಾದವರಿದ್ದರು.


loading...

No comments