Breaking News

ಈಜಿಪ್ಟ್ ನ 500ಕೆಜಿ ತೂಕದ ವಿಶ್ವದ ದಡೂತಿ ಮಹಿಳೆ ಈಗ ಹೇಗಿದ್ದಾಳೆ.

ಮುಂಬೈ : ಈಜಿಪ್ಟ್ ನ ಕೈರೋ ನಿವಾಸಿ 500ಕೆಜಿ ತೂಕದ ವಿಶ್ವದ ದಢೂತಿ ಮಹಿಳೆ ಎಮನ್ ಅಹ್ಮದ್ ತನ್ನ ತೂಕ ಇಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಬಂದು ಒಂದು ವಾರ ಕಳೆದಿದೆ. ಈಗಾಗಲೇ ಎಮನ್ ಅಹ್ಮದ್ ತೂಕದಲ್ಲಿ 30ಕೆಜಿಗಳಷ್ಟು ಇಳಿದಿದೆ, ಎಮಾನ್ ಆರೋಗ್ಯದಲ್ಲಿಯೂ ಉತ್ತಮ ಸುಧಾರಣೆಯಾಗಿದೆ ಎಂದು ತಿಳಿದು ಬಂದಿದೆ.
ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಮಾನ್ ಅಹ್ಮದ್ ಕಳೆದ 13 ವರ್ಷಗಳಿಂದ ಮಲಗಿದ್ದಲ್ಲಿಯೇ ಇದ್ದಾಳೆ. ಈಗಾಗಲೇ ಅಂಗಗಳು ಚಲನೆ ಶುರುಮಾಡಿದೆ. ಆರೋಗ್ಯದಲ್ಲಿಯೂ ಸುಧಾರಣೆ  ಕಾಣ್ತಾ ಇದ್ದು ಸಂತೋಷಗೊಂಡಿರುವ ಎಮಾನ್ ವೈದ್ಯರಿಗೆ ಧನ್ಯವಾದ ಹೇಳಿದ್ದಾಳೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಬೊಜ್ಜು ಸೇರಿದಂತೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗ್ತಾ ಇದೆ.
ಎಮಾನ್ ಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಾದರೆ ಆಕೆಯ ತೂಕ ಇನ್ನೂ ಇಳಿಯಬೇಕೆಂದು ವೈದ್ಯರು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸುವ ಟೇಬಲ್ 450ಕೆಜಿ ತೂಕವನ್ನಷ್ಟೇ ತಡೆಯಬಲ್ಲದು. ಎಮಾನ್ ದೇಹದ ಅಗಲವೂ ಹೆಚ್ಚಿದ್ದು ಆಕೆಯ ಶಸ್ತ್ರ ಚಿಕಿತ್ಸೆ ನಡೆಸಬೇಕಾದರೆ ಆಕೆಯ ತೂಕ ಇನ್ನೂ ಇಳಿಯಬೇಕು ಎಂದು ವೈದ್ಯರು ಹೇಳಿದ್ದಾರೆ.
loading...

No comments