ಇದೇ ಗುರುವಾರ ತೆರೆಗೆ ಅಪ್ಪಳಿಸಲಿದೆ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಹೆಬ್ಬುಲಿ.
ಬೆಂಗಳೂರು : ಬಿಡುಗಡೆಗೆ ಮೊದಲೇ ಸುದ್ದಿ ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಹೆಬ್ಬುಲಿ ಸಿನಿಮಾ ಇದೇ ಗುರುವಾರ ಅಂದರೆ ಫೆ23 ರಂದು ಬಿಡುಗಡೆಗೊಳ್ಳಲಿದೆ, ಚಿತ್ರದ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ. ಈಗಾಗಲೇ ಹೆಬ್ಬುಲಿ ಚಿತ್ರದ ಸೆನ್ಸಾರ್ ಪೂರ್ಣಗೊಂಡಿದ್ದು , ಸಿನಿಮಾಕ್ಕೆ U/A ಸರ್ಟಿಫಿಕೇಟ್ ಸಿಕ್ಕಿದೆ.
ಹೆಬ್ಬುಲಿ ಚಿತ್ರದಲ್ಲಿ ಸುದೀಪ್ ಮೊಟ್ಟ ಮೊದಲ ಬಾರಿಗೆ ಸೈನಿಕನ ಪಾತ್ರ ನಿರ್ವಹಿಸುತ್ತಿದ್ದು, ಬಹುಭಾಷಾ ನಟಿ ಅಮಲಾ ಪೌಲ್ ಸುದೀಪ್ ಗೆ ನಾಯಕಿಯಾಗಿದ್ದಾಳೆ. ಅಷ್ಟೇ ಅಲ್ಲದೆ ಅಮಲಾ ಪೌಲ್ ಮೊದಲ ಬಾರಿಗೆ ಕನ್ನಡ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಶುಕ್ರವಾರ ಬಿಡುಗಡೆ ಕಾಣಲಿದ್ದ ಮೂರು ಕನ್ನಡ ಸಿನಿಮಾಗಳು ಸೆನ್ಸಾರ್ ತೊಂದರೆಯಿಂದಾಗಿ ಬಿಡುಗಡೆ ದಿನವನ್ನು ಮುಂದೂಡಿದೆ. ಇದರಿಂದ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಬಿಡುಗಡೆಯೂ ಮುಂದೂಡಲಾಗುವುದೋ ಎಂಬ ಅನುಮಾನ ಕೊಚ್ಚಿ ಸುದೀಪ್ ಅಭಿಮಾನಿಗಳದಾಗಿತ್ತು. ಈಗ ಹೆಬ್ಬುಲಿ ನಿರ್ದೇಶಕ ಕೃಷ್ಣ ಅವರು ಚಿತ್ರ ನಿಗದಿತ ದಿನದಂದೇ ಬಿಡುಗಡೆಯಾಗಲಿದೆ ಎನ್ನುವ ಮೂಲಕ ಕಿಚ್ಚನ ಅಭಿಮಾನಿಗಳ ಅನುಮಾನಗಳನ್ನು ದೂರ ಮಾಡಿದ್ದಾರೆ.
loading...
No comments