ಸಿ.ಎಂ ಸಿದ್ದರಾಮಯ್ಯ ಆಪ್ತ ಪಿ ರಮೇಶ್ ರಿಂದ ಲೈಂಗಿಕ ದೌರ್ಜನ್ಯ.
ಬೆಂಗಳೂರು : ಸಿ.ಎಂ.ಸಿದ್ದರಾಮಯ್ಯ ಆಪ್ತ ಪಿ.ರಮೇಶ್ ಮೇಲೆ ಮಹಿಳೆಯೋರ್ವರು ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಮಾಡಿದ್ದಾರೆ. ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ವರ್ಗಾವಣೆ ವಿಚಾರವಾಗಿ ಮಾತನಾಡಲು ಪಿ.ರಮೇಶ್ ಬಳಿ ಹೋದಾಗ ಅವರು ತನ್ನನ್ನು ನಗರದ ಪ್ರತಿಷ್ಠಿತ ಹೋಟೇಲ್ ಒಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಟೀಚರ್ ಕೆಲಸದ ವರ್ಗಾವಣೆ ವಿಚಾರದ ಸಂಬಂಧ ನಾನು ರಮೇಶ್ ಬಳಿ ತೆರಳಿದಾಗ ನಗರದ ಪ್ರತಿಷ್ಟಿತ ಹೋಟೆಲ್ ಗೆ ಕರೆದೊಯ್ದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಈ ಬಗ್ಗೆ ಭಾನುವಾರ ಸಂಜೆ ನಾಲ್ಕು ಗಂಟೆಗೆ ಹಲಸೂರು ಗೇಟ್ ಪೋಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೋಲೀಸರು ನನ್ನ ದೂರು ಸ್ವೀಕರಿಸಿಲ್ಲ ಅಲ್ಲದೆ ಪೋಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪೋಲೀಸರಿಗೆ ದೂರು ನೀಡಿದರೆ ಹತ್ಯೆ ಮಾಡೋದಾಗಿ ನನಗೆ ರಮೇಶ್ ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.
ಆದರೆ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಮಹಿಳೆಯ ಆರೋಪವನ್ನು ಪೋಲೀಸರು ತಳ್ಳಿಹಾಕಿದ್ದು, ಈ ಸಂದರ್ಭ ಪ್ರತಿಕ್ರಿಯಿಸಿದ ಡಿಸಿಪಿ ಅಜಯ್ ಹಿಲೋರಿ "ರಮೇಶ್ ವಿರುದ್ಧ ದೂರು ನೀಡಲು ಯಾರೂ ಪೋಲೀಸ್ ಠಾಣೆಗೆ ಬಂದಿಲ್ಲ, ಮಾಧ್ಯಮ ಪ್ರತಿನಿಧಿಗಳಿಂದಾಗಿಯೇ ನಮಗೂ ವಿಷಯ ತಿಳಿಯಿತು. ನಮಗೆ ದೂರು ಸ್ವೀಕರಿಸಿಕೊಳ್ಳಬೇಡಿ ಎಂದು ಯಾರೂ ಒತ್ತಡ ಹೇರಿಲ್ಲ . ಪೋಲೀಸ್ ಠಾಣೆಗೆ ಬಂದು ದೂರು ನೀಡಿದರೆ ಸ್ವೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ.
loading...
No comments