Breaking News

ಜಾಕೀರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಪಾತಕಿ ದಾವೂದ್ ಇಬ್ರಾಹಿಂನಿಂದ ಹಣದ ನೆರವು.

ನವದೆಹಲಿ : ವಿವಾದಿತ ಧರ್ಮ ಪ್ರಚಾರಕ ಜಾಕೀರ್ ನಾಯ್ಕ್ ರ ಒಡೆತನದ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಮುಂಬೈ ಸ್ಫೋಟದ ರುವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹವಾಲಾದ ಮುಖಾಂತರ ಹಣದ ನೆರವು ನೀಡುತ್ತಿದ್ದ ಎಂದು ಹೇಲಾಗುತ್ತಿದೆ.

ತಮ್ಮ ಭಾಷಣಗಳ ಮೂಲಕ ಯುವ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕ ಕೃತ್ಯಕ್ಕೆ ಪ್ರೇರೇಪಿಸುತ್ತಾನೆ ಎಂದು ಜಾಕೀರ್ ನಾಯಕ್ ಮೇಲೆ ಗಂಭೀರ ಆರೋಪವಿದೆ. ಈಗ ಜಾರಿ ನಿರ್ದೇಶನಾಲಯದಿಂದ ಬಂಧಿತನಾಗಿರುವ ಜಾಕೀರ್ ನಾಯ್ಕ್ ನ ಆಪ್ತ , ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮುಖ್ಯ ಹಣಕಾಸು ಅಧಿಕಾರಿ ಅಮೀರ್ ಗಜ್ದರ್ ವಿಚಾರಣೆ ವೇಳೆ ಜಾಕೀರ್ ನಾಯಕ್ ರಿಗೂ ಪಾತಕಿ ದಾವೂದ್ ಇಬ್ರಾಹಿಮ್ ಗು ನಿಕಟ ಸಂಬಂಧದ ಬಗ್ಗೆ ಬಾಯ್ಬಿಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಹಣದ ವಹಿವಾಟಿಗಾಗಿಯೇ ಅನೇಕ ನಕಲಿ ಕಂಪನಿಗಳನ್ನು ತೆರೆದಿದ್ದು ಈಗ ಬಂಧಿತನಾಗಿರುವ ಅಮೀರ್ ಗಜ್ದರ್ 6 ನಕಲಿ ಕಂಪನಿಗಳಿಗೆ ನಿರ್ದೇಶಕನಾಗಿದ್ದನೆಂದು ಹೇಳಲಾಗುತ್ತಿದೆ. ಯುಕೆಯಲ್ಲಿ ಆರಂಭಿಸಲಾಗಿದ್ದ ಯೂನಿವರ್ಸಲ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ ಮತ್ತು ಲಾರ್ಡ್ಸ್ ಪ್ರೊಡಕ್ಷನ್, ಮುಂಬೈನಲ್ಲಿ ಆರಂಭಿಸಲಾಗಿದ್ದ ಲಾಂಗ್ ಲಾಸ್ಟ್ ಕನ್ಸ್ಟ್ರಕ್ಷನ್ಸ್, ಹಾರ್ಮಾನಿ ಮೀಡಿಯಾ, ಮೆಜೆಸ್ಟಿಕ್ ಪರ್ಫ್ಯೂಮ್ಸ್ ಮತ್ತು ಆಲ್ಫಾ ಲೂಬ್ರಿಕೆಂಟ್ಸ್ ನಲ್ಲಿ ಅಮೀರ್ ಗಜ್ದರ್ ನಿರ್ದೇಶಕನಾಗಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.
loading...

No comments