Breaking News

ಯಶ್ ದುಬಾರಿ ಕಾರಿನ ಗ್ಲಾಸ್ ಪುಡಿಪುಡಿಗೈದ ಅಭಿಮಾನಿಗಳು


ಯಾದಗಿರಿ : ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಚಿತ್ರನಟ ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸುರಪುರದಲ್ಲಿ ರೈತರ ಜೊತೆ ಸಂವಾದಕ್ಕೆ ನಟ ಯಶ್ ಮಧ್ಯಾಹ್ನ 2 ಗಂಟೆಗೆ ಬರಬೇಕಿತ್ತು. ಯಶ್ ನೋಡಲು ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಸಂವಾದಕ್ಕಿಂತ ಹೆಚ್ಚಾಗಿ ನಟನನ್ನು ಕಣ್ತುಂಬಿಕೊಳ್ಳಲೆಂದು ಜನರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಆದರೆ ಯಶ್ ಬಂದಿದ್ದು ರಾತ್ರಿ 9 ಗಂಟೆಗೆ. ಅಷ್ಟರಲ್ಲಾಗಲೇ ಅಭಿಮಾನಿಗಳ ಆಕ್ರೋಶ ಕಟ್ಟೆ ಒಡೆದಿತ್ತು.   ಯಶ್ ಬರುತ್ತಿದ್ದಂತೆ ಕಾರಿನ ಮೇಲೆ ಮುಗಿಬಿದ್ದರು. ಇದರಿಂದ ಅವರ ದುಬಾರಿ ಕಾರಿನ ಗ್ಲಾಸ್ ಪುಡಿಪುಡಿಯಾಯಿತು. ಕೆಲವು ಅಭಿಮಾನಿಗಳು ಆಕ್ರೋಶದಿಂದ ಛೇರ್‍ಗಳನ್ನು ಎತ್ತಿ ಬಿಸಾಡಿ ದಾಂಧಲೆ ನಡೆಸಿದ ಘಟನೆಯೂ ನಡೆಯಿತು.

loading...

No comments