ಗನ್ ತೆಗೆದು ಬೆದರಿಸಿದ ಪಿಎಸ್ಐಗೆ ಕಪಾಲ ಮೋಕ್ಷ ಮಾಡಿದ ಸಾರ್ವಜನಿಕರು
photosource tv-9 |
ಕಾನೂನು ಕೈಗೆತ್ತಿಕೊಂಡ ಗ್ರಾಮಸ್ತರ ವಿರುದ್ಧ ಅಣ್ಣಾಮಲೈ ಗರಂ
ಚಿಕ್ಕಮಗಳೂರು : ಚಿಕ್ಕಮಗಳೂರಿನ ಜಿಲ್ಲೆಯ ಮೂಗ್ತಿಹಳ್ಳಿ ಗ್ರಾಮದಲ್ಲಿ ಪಿ.ಎಸ್.ಐ ಮೇಲೆ ಸ್ಥಳೀಯರು ಹಲ್ಲೆ ಮಾಡಿದ ಘಟನೆ ವರದಿ ಆಗಿದೆ . ಗ್ರಾಮಾಂತರ ಠಾಣೆ ಪಿ.ಎಸ್.ಐ ಗವಿರಾಜ್ ಅವರೇ ಹಲ್ಲೆಗೊಳಗಾದ ಪೋಲೀಸ್. ಗವಿರಾಜ್ ಚಲಾಯಿಸುತ್ತಿದ್ದ ಕಾರು ಬೇರೊಂದು ಕಾರು ಡಿಕ್ಕಿ ಹೊಡೆದಿದೆ.
ಈ ಸಂದರ್ಭದಲ್ಲಿ ಗವಿರಾಜ್ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದ್ದು ಗವಿರಾಜ್ ತಮ್ಮ ರಿವಾಲ್ವರ್ ತೆಗೆದು ಸ್ಥಳೀಯರನ್ನು ಹೆದರಿಸುವ ಯತ್ನ ಮಾಡಿದ್ದಾರೆ.ಗನ್ ತೋರಿಸಿದ ಪಿ.ಎಸ್.ಐ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದು ಕಪಾಲ ಮೋಕ್ಷ ಮಾಡಿದ್ದಾರೆ.ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಥಳಕ್ಕೆ ಆಗಮನಿಸಿದ ಜಿಲ್ಲಾ ಎಸ್ಪಿ ಅಣ್ಣ ಮಲೈ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು.ರಸ್ತೆ ತಡೆ ನಡೆಸಿದ ಗ್ರಾಮಸ್ತರ ವಿರುದ್ಧ ಎಸ್ಪಿ ಗರಂ ಆಗಿ ಯಾರು ಕಾನೂನು ಅನ್ನು ಕೈಗೆ ಎತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ .ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು . ಪೋಲೀಸರ ಮೇಲೆ ಹಲ್ಲೆ ನಡೆಸಿದ ಆರು ಜನ ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ
ಗವಿರಾಜ್ ಹೇಳಿಕೆ : ನಾನು ಯಾರನ್ನು ಹೆದರಿಸಲು ಗನ್ ತೆಗೆದಿಲ್ಲ. ಕಾರು ಅಪಘಾತವಾಗಿ ಕೆಳಗಿಳಿಯುವಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾನು ಕೆಳಗೆ ಬಿದ್ದೆ. ನನ್ನ ಜೇಬಿನಲ್ಲಿದ್ದ ಗನ್ ಕೂಡ ಕೆಳಗೆ ಬಿದ್ದಿದ್ದು ಅದನ್ನು ಸೇಪ್ಟಿಗಾಗಿ ಕೈಯಲ್ಲಿ ಹಿಡಿದುಕೊಂಡೆ. ನಾನು ಯಾರನ್ನೂ ಗನ್ ತೋರಿಸಿ ಹೆದರಿಸಿಲ್ಲ ಎಂದಿದ್ದಾರೆ.
ಗ್ರಾಮಸ್ಥರ ಹೇಳಿಕೆ : ಪೋಲೀಸರು ಚಲಾಯಿಸುತ್ತಿದ್ದ ಕಾರು ಗ್ರಾಮದ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಕಾರಿಗೆ ಡಿಕ್ಕಿ ಹೊಡೆಸಿದ್ದಲ್ಲದೆ ಅವರ ಮೇಲೆ ಪೋಲೀಸರು ಹಲ್ಲೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಒಟ್ಟು ಸೇರಿದ್ದು ಪಿ.ಎಸ್.ಐ ಗವಿರಾಜ್ ಗ್ರಾಮಸ್ಥರಿಗೆ ಗನ್ ಹೊರ ತೆಗೆದು ಹೆದರಿಸಿದ್ದಾರೆ .
loading...
No comments