Breaking News

ಯೋಧರ ಗುಂಡಿಗೆ ಉಗ್ರ ಬಲಿ ಸತತ 12 ಗಂಟೆ ನಡೆಸಿದ ಕಾರ್ಯಾಚರಣೆ


ಲಕ್ನೋ :  ಲಕ್ನೋ ಹೊರವಲಯದ ಅಡಗುದಾಣದ ಮೇಲೆ ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಭದ್ರತಾ ಪಡೆಗಳು ಒಬ್ಬ ಶಂಕಿತ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಈತ ಮೊನ್ನೆ ಸಂಭವಿಸಿದ್ದ ಉಜ್ಜಯಿನ್ ರೈಲು ಸ್ಫೋಟದಲ್ಲಿ ಭಾಗಿಯಾಗಿದ್ದನೆಂದು ಶಂಕಿಸಲಾಗಿದೆ.

ಶರಣಾಗತಿಯಿಲ್ಲ, ಹುತಾತ್ಮನಾಗುವೆ

ಲಕ್ನೋ ಹೊರ ವಲಯದಲ್ಲಿ ಶಂಕಿತ ಉಗ್ರ ಸೈಫುದ್ದೀನ್‌ನನ್ನು ಜೀವಂತ ಸೆರೆಹಿಡಿಯಲು ಪೊಲೀಸರು ಪ್ರಯತ್ನಿಸಿ ಆತನ ಸೋದರನಿಂದ ಅವನಿಗೆ ಮೊಬೈಲ್ ಫೋನಿನಲ್ಲಿ ಶರಣಾಗುವಂತೆ ಸೂಚನೆ ನೀಡಲಾಯಿತು.

ಅದಕ್ಕೆ ಆತ `ಶರಣಾಗುವ ಪ್ರಶ್ನೆಯೇ ಇಲ್ಲ, ಏನಿದ್ದರೂ ನಾನು ಹುತಾತ್ಮನಾಗುತ್ತೇನೆ’ ಎಂದು ಹೇಳಿದ್ದನಂತೆ.

ಕಾನ್ಪುರದಲ್ಲಿರುವ ಆತನ ಸೋದರ ಖಾಲಿದ್‌ನೊಂದಿಗೆ ಸಂಪರ್ಕ ಬೆಳೆಸಿದ ಪೊಲೀಸರು ಆತನೊಂದಿಗೆ ಮಾತನಾಡುವಂತೆ ಮೊಬೈಲ್ ಫೋನ್‌ನನ್ನು ಬಾಗಿಲ ಸಂದಿಯಿಂದ ತೂರಿಸಿದ್ದರು. ಈ ಮಾತುಕತೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೆಲ ನಿಮಿಷ ನಡೆದ ಸಹೋದರ ಸಂವಾದದಲ್ಲಿ ಖಾಲಿದ್ ಆತನಿಗೆ ಶರಣಾಗುವಂತೆ ಎಷ್ಟೇ ಬೇಡಿಕೊಂಡರೂ ಅದನ್ನು ತಿರಸ್ಕರಿಸಿ ಸಾಯುವುದೇ ಸರಿ ಮಾರ್ಗವೆಂದು ವಾದಿಸಿದ್ದ.

ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರನನ್ನು ಶರಣಾಗುವಂತೆ ನಿಗ್ರಹ ದಳ ನೀಡಿದ ಸೂಚನೆಯನ್ನು ಪರಿಗಣಿಸದೇ ಗುಂಡಿನ ದಾಳಿ ಮುಂದುವರೆಸಿದ್ದ ಕಾರಣ ಸೈನಿಕರು ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಉಗ್ರ ಸೈಫುಲ್ಲಾ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಉಗ್ರಗಾಮಿ ಎಂದು ಶಂಕಿಸಲಾಗಿದೆ. ಇಸಿಸ್‌ಗೆ ಸೇರಿದ ಬಾವುಟ ಕೂಡ ಅತನಿದ್ದ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಶಸ್ತ್ರಾಸ್ತ್ರ ಪತ್ತೆ

ಉಗ್ರ ಸೈಫುಲ್ಲಾ ಅವಿತು ಕುಳಿತಿದ್ದ ಮನೆಯಲ್ಲಿ ಪಿಸ್ತೂಲು, ರಿವಾಲ್ವರ್, ಚಾಕುಗಳು, ಅಪಾರ ಗುಂಡುಗಳು, ಬಾಂಬ್ ತಯಾರಿಕೆಯಲ್ಲಿ ಬಳಸಲಾಗುವ ಟೈಮರ್ ಮತ್ತು ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಥಳದಲ್ಲಿ ದೊರೆತ ಪಾಸ್ ಪೋರ್ಟ್ ಮತ್ತು ಇತರೆ ವಸ್ತುಗಳ ಆಧಾರದ ಮೇಲೆ ಆತನ ಸ್ನೇಹಿತರ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಈ ಸ್ಥಳದಲ್ಲಿ ಕೆಲವು ಮೊಬೈಲ್‌ಗಳೂ ದೊರೆತ್ತಿದ್ದು, ಅವುಗಳ  ಮಾಹಿತಿ ಆಧರಿಸಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಸೈಫುಲ್ಲಾನನ್ನು ಜೀವಂತ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಯಿತಾದರೂ ಆತ ಅಡಗಿದ್ದ ಮನೆಯೊಳಗೆ ಭದ್ರತಾ ಪ‌ಡೆಗಳು ನುಗ್ಗುವಷ್ಟರಲ್ಲೇ ಸತ್ತು ಹೋಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅವನನ್ನು ಜೀವ ಸಹಿತ ಹಿಡಿಯಬೇಕೆಂಬ ಬಯಕೆಯಿಂದ ಮನೆ ಬಾಗಿಲು ತೆರೆದು ಒಳ ಹೊಕ್ಕಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಮಧ್ಯದಲ್ಲೇ ಅವನು ಮಡಿದುಬಿದ್ದಿದ್ದ. ಈ ಅಡಗುದಾಣದಲ್ಲಿ ಮತ್ತೊಬ್ಬ ಶಂಕಿತ ಭಯೋತ್ಪಾದಕ ಇದ್ದಿರಬಹುದೆಂದು ಮೊದಲು ನಂಬಲಾಗಿತ್ತಾದರೂ ಕೊನೆಗೆ ಅಲ್ಲಿದ್ದದ್ದು ಒಬ್ಬನೇ ಎಂದು ಸ್ಪಷ್ಟವಾಯಿತೆಂದು ಅವರು ಹೇಳಿದರು.

ಈ ಸೈಫುಲ್ಲಾ ಐಸಿಸ್‌ನ ಸದಸ್ಯನೆಂಬುದೂ ಸ್ಪಷ್ಟವಾಗಿದೆ. ಈತ ಮನೆಯಿಂದ ಹೊರ ಬರುವಂತೆ ಮಾಡಲು ಟಯರ್ ಗ್ಯಾಸ್ ಷೆಟ್ ಮತ್ತು ಮೆಣಸಿನಕಾಯಿ ಬಾಂಬ್‌ಗಳನ್ನು ಸಿಡಿಸಲಾಯಿತಾದರೂ ಆತ ಮನೆಯಿಂದ ಹೊರಬರಲಿಲ್ಲ. ಆಗ ಕಮಾಂಡೋ ಪಡೆ ಅಡಗುದಾಣದ ಒಳಗೆ ನುಗ್ಗಿತು. ಆ ಸಂದರ್ಭದಲ್ಲಿ ಆತ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಪೊಲೀಸರು ನೀಡಿದರು.

ಮನೆಯೊಳಗೆ ಪರಿಶೀಲನೆ ಮಾಡಿದಾಗ ಆತ ಸತ್ತು ಬಿದ್ದಿರುವುದು ಕಂಡುಬಂದಿತು. ಅವನು ಹೊಟ್ಟೆ ಸುತ್ತ ವೈರ್ ಬಿಗಿದುಕೊಂಡಿದ್ದು, ಅದು ಬಾಂಬಾಗಿರಬಹುದೆಂಬ ಶಂಕೆಯಿಂದ ಬಾಂಬ್ ನಿಷ್ಕ್ರಿಯಗೊಳಿಸುವ ತಂಡಕ್ಕೆ ಮೊದಲು ಪರಿಶೀಲನೆ ಮಾಡಲು ಅವಕಾಶ ನೀ‌ಡಲಾಗಿದೆ. ನಂತರ ವಿವರವಾದ ತನಿಖೆ ಆರಂಭಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.
-pti

loading...

No comments