Breaking News

ಮುಲ್ಕಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರದ ಕೈ ಮತ್ತು ಕಮಲ ಪಕ್ಷದ ಟಿಕೆಟ್ ಅಕಾಂಕ್ಷಿಗಳು


ಮಂಗಳೂರು : ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ  ದಕ್ಷಿಣ ಕನ್ನಡ ಜಿಲ್ಲೆಯ  ಮುಲ್ಕಿ ಮೂಡಬಿದರೆ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ .ಕ್ಷೇತ್ರದಲ್ಲಿ 1962 ರಿಂದ 2013 ರ ವರೆಗೆ ಕಾಂಗ್ರೆಸ್ 7 ಬಾರಿ ಜಯಭೇರಿ ಸಾಧಿಸಿದ್ದು .ಕ್ಷೇತ್ರದಲ್ಲಿ ಸರಿ ಸುಮಾರು ಒಂದು ಲಕ್ಷದ 90 ಸಾವಿರ ಮತದಾರರು ಇದ್ದಾರೆ ,ಬಿಲ್ಲವ ಸಮುದಾಯದ ಮತದಾರು ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ .ಇದೀಗ ಕ್ಷೇತ್ರದ ಪ್ರಮುಖ ರಾಜಕೀಯ ಪಕ್ಷಗಳಾದ  ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಲೆಕ್ಕಚಾರ ನಡೆಯುತಿದೆ ಮತ್ತು ಟಿಕೆಟ್ ಅಕಾಂಕ್ಷಿಗಳು  ವಿವಿಧ ರೀತಿಯ ಕಸರತ್ತನ್ನು ನಡೆಸಿ ರಣತಂತ್ರವನ್ನು ರೂಪಿಸುತ್ತಿದ್ದಾರೆ .

ಕಾಂಗ್ರೆಸ್ಸಿನ ಟಿಕೆಟ್ ಅಕಾಂಕ್ಷಿಗಳು
೧) ಮಿಥುನ್ ರೈ (ಯೂತ್ ಕಾಂಗ್ರೆಸ್ ಮುಖಂಡ )
ಕಾಂಗ್ರೆಸ್ ಯುವ ಮುಖಂಡನಾಗಿ ಗುರುತಿಸಿಕೊಂಡ ಮಿಥುನ್ ರೈ ಈ ಬಾರಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ .ಕ್ಷೇತ್ರದ ಯುವ ಪಿಡಿಯನ್ನು ತಮ್ಮತ್ತ ಸೆಳೆಯಲು ಟೊಂಕ ಕಟ್ಟಿ ನಿಂತು ನಿರಂತರ ಶ್ರಮಿಸುತ್ತಿದ್ದಾರೆ ,ಹಿಂದುತ್ವ ಮತ್ತು ಪ್ರಶಾಂತ್ ಪೂಜಾರಿಯ ಹೆಸರು ಹೇಳಿ ವೋಟ್ ಬ್ಯಾಂಕ್ ಸ್ರಷ್ಟಿಸಲು ಹೋರಾಟ ಬಿಜೆಪಿಗೆ ಸಡ್ಡು ಬಡಿಯಲು ಮೂಡಬಿದರೆ ಕ್ಷೇತ್ರದಲ್ಲಿ 75 ಬಡ ಕುಟುಂಬಗಳಿಗೆ ಗೋವುಗಳನ್ನು ದಾನ ಮಾಡಿ ಕಾಂಗ್ರೆಸ್ ನಲ್ಲಿ ವಿಭಿನ್ನ ನಾಯಕನಾಗಿ ಹೊರ ಹೊಮ್ಮಲು ಪ್ರಯತ್ನಿಸಿದ್ದಾರೆ .ಹಿಂದೂ ಸಂಘಟನೆಗಳಿಂದ ದೂರವಾದ ಮೂಡುಬಿದಿರೆ ವಲಯದ ಶಿರ್ತಾಡಿ, ಬೆಳುವಾಯಿ ಪುತ್ತಿಗೆ ಮುಂತಾದ ಕಡೆಗಳಲ್ಲಿ ಯುವಕರ ಗುಂಪನ್ನು ಸಂಪರ್ಕಿಸಿ ಸಂಘಟನೆ ಗೊಳಿಸಲು ಯತ್ನಿಸುತ್ತಿದ್ದಾರೆ , ಮೂಡಬಿದರೆ ಶಾಸಕ ಅಭಯಚಂದ್ರ ಜೈನ ಅವರ ಮಂತ್ರಿಗಿರಿ ಹೋದ ನಂತರ ಮಿಥುನ್ ಅವರನ್ನು ಸ್ವತಃ ಅಭಯಚಂದ್ರ ಜೈನ ಅವರೇ ಕ್ಷೇತ್ರದ ಮುಂದಿನ ನಾಯಕನೆಂದು ಘೋಷಿಸಿ ಸಿದ್ದರಾಮಯ್ಯ ನವರಿಗೂ ಈ ವಿಷಯ ತಿಳಿಸಿದ್ದು ನಾವು ಗಮನಿಸಿ ಇರಬಹುದು .ಅದಲ್ಲದೆ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುತ್ತಾರೆ .

೨) ದಿನೇಶ್ ಅಮೀನ್ ಮಟ್ಟು ( ಸಿ ಎಂ ಮಾಧ್ಯಮ ವಕ್ತಾರ )
ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ವಕ್ತಾರರಾಗಿ ಮತ್ತು ಸಿಎಂ ಅವರ   ಆಪ್ತ ವಲಯದಲ್ಲಿ ಗುರುತಿಸಿಕೊಂಡ ದಿನೇಶ್  ಅಮೀನ್ ಮಟ್ಟು ಅವರು ಈ ಬಾರಿ ಮುಲ್ಕಿ ಮೂಡಬಿದರೆ ಕ್ಷೇತ್ರದ ಟಿಕೆಟ್ ಪಡೆಯಲು ಹಾತೊರೆಯುತ್ತಿದ್ದಾರೆ .ಕಮ್ಯುನಿಸ್ಟ್ ಪ್ರಾಬಲ್ಯವನ್ನು ಹೊಂದಿದ ಇವರು ಬರಹಗಾರರಾಗಿ ಹಲವು ಬಾರಿ ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿರುವ ಬಲಪಂಥೀಯ ಸಂಘಟನೆಗಳ ವಿರುದ್ಧ ಕಿಡಿ ಕಾರಿ ಮಾಧ್ಯಮಗಳಲ್ಲಿ ಬಾರಿ ಸದ್ದು ಮಾಡಿರುತ್ತಾರೆ.ಬಿಲ್ಲವ ಸಮುದಾಯ ವೋಟ್ ಬ್ಯಾಂಕ್ ಕಡೆ ಕಣ್ಣಿಟ್ಟು ಕ್ಷೇತ್ರದಲ್ಲಿ ವಿವಿಧ ರೀತಿಯ ಕಾರ್ಯ ತಂತ್ರವನ್ನು ರೂಪಿಸುತ್ತಿದ್ದಾರೆ .


ಬಿಜೆಪಿಯ ಟಿಕೆಟ್ ಅಕಾಂಕ್ಷಿಗಳು

೧) ನಳೀನ್ ಕುಮಾರ್ ಕಟೀಲ್ (  ಸಂಸದ )
ದಕ್ಷಿಣ ಕನ್ನಡ ಬಿಜೆಪಿ ಸಂಸದರಾಗಿ  ಮಂಗಳೂರು ಬಿಜೆಪಿಯನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡ ನಳೀನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎರಡು ಕ್ಷೇತ್ರದ ಮೇಲೆ ಕಣ್ಣು ಇಟ್ಟಿದ್ದಾರೆ .ಅದರಲ್ಲಿ ಮುಲ್ಕಿ ಮೂಡಬಿದರೆ ಕ್ಷೇತ್ರದಿಂದ ಸ್ಪರ್ಧಿಸಲು ಹಾತೊರೆಯುತ್ತಿದ್ದಾರೆ .ಇದಕ್ಕೆ ಪೂರಕವಾಗುವಂತೆ ಕ್ಷೇತ್ರದಲ್ಲಿ ತನ್ನ ಬಲಗೈ ಬಂಟರನ್ನು ಬಿಜೆಪಿ ಪದಾಧಿಕಾರಿಗಳಾಗಿ ನೇಮಿಸಿದ್ದಾರೆ .ಪ್ರಶಾಂತ್ ಪೂಜಾರಿ ಹತ್ಯೆ ,ನೇತ್ರಾವತಿ ಹೋರಾಟ ಮತ್ತು  ಹಿಂದುತ್ವ ಮೂಲಕ  ಮತದಾರನ್ನು ಸೆಳೆಯುವ ತಂತ್ರವನ್ನು ರೂಪಿಸುತ್ತಿದ್ದಾರೆ .

೨) ಉಮಾನಾಥ್ ಕೋಟ್ಯಾನ್ ( ಜಿಲ್ಲಾ ಪ್ರಧಾನ ಕಾರ್ಯದರ್ಶಿ )
ಕಳೆದ ಚುನಾವಣೆಯಲ್ಲಿ ಅಭಯ ಚಂದ್ರ ಜೈನ ಅವರ ವಿರುದ್ಧ  5450 ಮೂಲಕ ಸೋಲು ಒಪ್ಪಿಕೊಂಡ ಉಮಾನಾಥ್ ಕೋಟ್ಯಾನ್ ಈ ಬಾರಿ ತನ್ನ ಎಲ್ಲ ಶಕ್ತಿಯನ್ನು ಉಪಯೋಗಿಸಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಪಡೆಯಲು ಹವಣಿಸುತ್ತಿದ್ದಾರೆ .ಮಂಗಳೂರು ಬಿಜೆಪಿಯ ಹಿರಿಯರ ಬಣದಲ್ಲಿ ಗುರುತಿಕೊಂಡ ಇವರು ಇತ್ತೀಚೆಗೆ ನಡೆದ ಬಿಜೆಪಿ ಜಿಲ್ಲಾಧ್ಯಕ್ಷ ಆಯ್ಕೆಯ ಸಂಧರ್ಭದಲ್ಲಿ  ಜಿಲ್ಲಾ ಬಿಜೆಪಿ ಎರಡು ಬಣಗಳ ನಡುವೆ ನಡೆದ ಕಲಹದಲ್ಲಿ  ಇವರಿಗೆ ಆದ ಹಿನ್ನಡೆಯಿಂದ ಎಲ್ಲಿ ಟಿಕೆಟ್ ತಪ್ಪಿ ಹೋಗುತ್ತದೆ ಎಂಬ ಕಾರಣದಿಂದ ಕ್ಷೇತ್ರದಲ್ಲಿ ಯುವ ಸಮುದಾಯವನ್ನು ಸಂಘಟಿಸುತ್ತಾ  ಕಾಲಿಗೆ ಚಕ್ರ ಕಟ್ಟಿ ಸುತ್ತುತಿದ್ದಾರೆ. ಬಿಲ್ಲವ ಸಮುದಾಯದ ರಾಜಕೀಯ ಪ್ರಭಾವಿ ನಾಯಕನಾಗಿ  ಗುರುತಿಸಿಕೊಂಡಿರುವುದು ಇವರ ಪ್ಲಸ್ ಪಾಯಿಂಟ್ ಆಗಿರುತ್ತದೆ .


೩) ಜಗದೀಶ್ ಅಧಿಕಾರಿ (ಜಿಲ್ಲಾ ಉಪಾಧ್ಯಕ್ಷ  )
ಭಾಷಣ ಕಾರ ಮಾತಿನಲ್ಲೇ ಮತದಾರನ್ನು ಸೆಳೆಯುವ ಜಗದೀಶ್ ಅಧಿಕಾರಿ ಈ ಬಾರಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿ ಹೊರ ಹೊಮ್ಮಿದ್ದಾರೆ .ಕ್ಷೇತ್ರದಲ್ಲಿ ಪ್ರಶಾಂತ್ ಪೂಜಾರಿ ಹತ್ಯೆ ಸಂಧರ್ಭದಲ್ಲಿ ನಡೆಸಿದ  ಹೋರಾಟ ಮತ್ತು ಹಿಂದುತ್ವದ ಹೆಸರಿನಲ್ಲಿ ಕ್ಷೇತ್ರದಲ್ಲಿ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ .ಇದಕ್ಕೆ ಪೂರಕವಾಗುವಂತೆ ಹಲವು ಸಮಾವೇಶಗಳಲ್ಲಿ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿರುತ್ತಾರೆ .ಕ್ಷೇತ್ರದ ಟಿಕೆಟ್ ಪಡೆಯಲು ಹಲವು ರೀತಿಯ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ .


loading...

No comments