ರೈತರ ಖಾತೆಗೆ ಈ ವಾರದಲ್ಲಿ ಬರಲಿದೆ ಬರ ಪರಿಹಾರದ ಹಣ
ಬೆಂಗಳೂರು: ಬೆಳೆನಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ಬಿಡುಗಡೆ ಮಾಡಿರುವ ₹ 450 ಕೋಟಿಯನ್ನು 11 ಜಿಲ್ಲೆಗಳ ರೈತರಿಗೆ ವಿತರಿಸಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.
ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಈ ಹಣವನ್ನು ರೈತರಿಗೆ ಹಂಚಿಕೆ ಮಾಡುವ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ನಡೆದಿತ್ತು. ಪೂರ್ತಿ ಹಣ ಕೊಡುವಂತೆ ರಾಜ್ಯ ಪಟ್ಟು ಹಿಡಿದಿತ್ತು. ಕೊಟ್ಟಿರುವ ಹಣ ಬಳಕೆ ಮಾಡಿ ಪ್ರಮಾಣ ಪತ್ರ ಕಳಿಸಿದರೆ ಉಳಿದ ಹಣ ನೀಡುವುದಾಗಿ ಕೇಂದ್ರ ಹೇಳಿತ್ತು.
26 ಜಿಲ್ಲೆಗಳ 160 ತಾಲ್ಲೂಕುಗಳು ಬರ ಪೀಡಿತವಾಗಿದ್ದು, ₹ 4,782ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ₹1,782 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ ₹ 450 ಕೋಟಿಯನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದೆ. ಇದನ್ನು 11 ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
-prajavani
loading...
No comments