Breaking News

ಮಾರ್ಚ್ 14 ರಂದು ವಿಚಾರಣೆಗೆ ಹಾಜರಾಗಲು ಝಾಕೀರ್ ನಾಯ್ಕ್ ಗೆ ನೋಟೀಸ್ ಜಾರಿ ಮಾಡಿದ NIA


ನವದೆಹಲಿ : ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕರ ಮೇಲಿರುವ ಮನಿ ಲ್ಯಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮಾರ್ಚ್ 14 ರಂದು ವಿಚಾರಣೆಗೆ ಹಾಜರಾಗಲು ಜಾಕಿರ್ ನಾಯಕ್ ಗೆ  ನೋಟೀಸ್ ಜಾರಿ ಮಾಡಲಾಗಿದೆ .ಎನ್ಐಎ ದೆಹಲಿ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಹಾಜರು ಆಗಲು  ನೋಟೀಸ್ ಜಾರಿ ಮಾಡಲಾಗಿದೆ .


ಝಾಕೀರ್ ನಾಯ್ಕ್ ಬಂಧನ ಭೀತಿಯಿಂದ ಇದೀಗ ಸೌದಿ ಅರೇಬಿಯಾಯದಲ್ಲಿ ತಲೆಮರೆಸಿಕೊಂಡಿದ್ದಾರೆ  ಎಂದು ನಂಬಲಾಗಿದೆ ಕಳೆದ ವರ್ಷ .ಢಾಕಾ ದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಬಂಧಿತನಾದ ಉಗ್ರನೊಬ್ಬ ತಾನು ಝಾಕೀರ್ ನಾಯ್ಕ್  ಭೋದನೆಯಿಂದ ಪ್ರೇರೇಪಿತನಾಗಿದ್ದು ಎಂದು ಒಪ್ಪಿಕೊಂಡಿದ್ದ .ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್  ಮೂಲಕ ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿ ಈ ಕಾರ್ಯಕೋಸ್ಕರ ಅನಾಮಿಕ ಮೂಲಗಳಿಂದ ಹಣ ಪಡೆದು ಕಾನೂನುಬಾಹಿರ ಚಟುವಟಿಕೆ ನಡೆಸಿದ ಆರೋಪ ಕೂಡ  ಝಾಕೀರ್ ನಾಯ್ಕ್ ಮೇಲಿದೆ .ಈ ನಡುವೆ ಝಾಕಿರ್ ನಾಯ್ಕ್  ಸಹೋದರಿ ನಿಲಾಹ್ ನೂರಾನಿ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಯನ್ನು ಮುಂಬೈನಲ್ಲಿಂದು ಭೇಟಿಯಾಗಿ ಹೇಳಿಕೆ ನೀಡಿದ್ದಾರೆ. ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದೆ.
 toi
loading...

No comments