Breaking News

ಕೇರಳದ 14ರ ಹುಡುಗ ದೇಶದ ಅತಿ ಕಿರಿಯ ಅಪ್ಪ



ತಿರುವನಂತಪುರಂ: ಗರಿಷ್ಠ ಅಂದರೆ ಎಷ್ಟನೇ ವಯಸ್ಸಿನವರಿಗೆ ಮಕ್ಕಳಾಗಬಹುದು ಎನ್ನುವ ಚರ್ಚೆ ಆಗಾಗ ನಡೆಯುತ್ತದೆ. ವಯೋವೃದ್ಧರೂ ಮಕ್ಕಳನ್ನು ಪಡೆದ ಸುದ್ದಿಯೂ ಬರುತ್ತಿರುತ್ತದೆ. ಆದರೆ, ಇದೀಗ ಚರ್ಚೆಯನ್ನು ಕೆಳಭಾಗದಿಂದ ಆರಂಭಿಸಬೇಕಾಗಿದೆ. ಯಾಕೆಂದರೆ, ಕೇರಳದಲ್ಲಿ 14ರ ಹುಡುಗನೊಬ್ಬ ಅಪ್ಪನಾಗಿದ್ದಾನೆ! ಅವನಿಗೆ ಸಿಕ್ಕಿರುವ 'ದೇಶದ ಅತಿ ಕಿರಿಯ ಅಪ್ಪ' ಎನ್ನುವ ಬಿರುದು ಸಮ್ಮಾನವೋ, ಅಪಮಾನವೋ ಗೊತ್ತಿಲ್ಲ.
ಇವನು 'ಚಿಕ್ಕ'ಪ್ಪ: ಕೊಚ್ಚಿಯಿಂದ 200 ಕಿ.ಮೀ. ದೂರದ ಹಳ್ಳಿಯ 18ರ ಹುಡುಗಿ ಗರ್ಭಿಣಿಯಾಗಿಬಿಡುತ್ತಾಳೆ. ಮದುವೆಯಾಗದಾಕಿ ಗರ್ಭಿಣಿಯಾಗಿದ್ದು ಹೇಗೆ ಎಂದು ವಿಚಾರಿಸಿದಾಗ ಆಕೆ ಬೊಟ್ಟು ಮಾಡಿದ್ದು ನೆರೆಮನೆಯ ಹುಡುಗನತ್ತ. ಅದನ್ನು ಕೇಳಿದ ಮನೆಯವರು ಹೌಹಾರಿದರು. ಯಾಕೆಂದರೆ ಆತನಿಗಿನ್ನೂ 14 ವರ್ಷ.
ಆತ ತನ್ನ ಮೇಲೆ ರೇಪ್‌ ಮಾಡಿದ್ದಾನೆ ಎಂಬ ಆಕೆಯ ದೂರಿನ ಮೇರೆಗೆ ಹುಡುಗನ ಮೇಲೆ ಪ್ರಕರಣ ದಾಖಲಿಸಲಾಯಿತು. ಆದರೆ, ಹುಡುಗ ಬೇರೆಯೇ ಕಥೆ ಹೇಳಿದ. ಅವಳೇ ನನ್ನಿಂದ ಬಲವಂತವಾಗಿ ಈ ಕೃತ್ಯ ಮಾಡಿಸಿದಳು ಅನ್ನೋದು ಅವನ ಆರೋಪ. ಕೊನೆಗೆ ಆಕೆಯ ವಿರುದ್ಧ ಪೋಕ್ಸೋ ಕಾಯಿದೆಯ ಸೆಕ್ಷನ್‌ 7 ಮತ್ತು 8(ಲೈಂಗಿಕ ದೌರ್ಜನ್ಯ)ರ ಅಡಿ ಪ್ರಕರಣ ದಾಖಲಾಗಿತ್ತು.
ಎರಡು ತಿಂಗಳ ಹಿಂದೆ ಹುಡುಗಿ, ಮಗುವಿಗೆ ಜನ್ಮ ನೀಡಿದ್ದು ಎಲ್ಲ ರೀತಿಯ ವೈಜ್ಞಾನಿಕ ಪರೀಕ್ಷೆಗಳೂ ಹುಡುಗನೇ ಮಗುವಿನ ತಂದೆ ಎನ್ನುವುದನ್ನು ಸಾಬೀತುಪಡಿಸಿವೆ. ಇಬ್ಬರೂ ಅಪ್ರಾಪ್ತರಾಗಿರುವುದರಿಂದ ಮುಂದೇನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ.
ಕೊಚ್ಚಿಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಬಾಲಕನನ್ನು ಈಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
VK

loading...

No comments