Breaking News

ಕಣ್ಣಿನ ಸುತ್ತಲು ಕಪ್ಪೇ ?



ಈ ಕೆಲವು ನೈಸರ್ಗಿಕ ವಸ್ತುಗಳನ್ನು ಟ್ರೈ ಮಾಡಿ
ಅಂದವಾದ ಮುಖದಲ್ಲಿ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಬಂದರೆ ಎಷ್ಟು ಅಸಹ್ಯ ಅನಿಸುತ್ತದೆ ಅಲ್ವಾ? ಡಾರ್ಕ್ ಸರ್ಕಲ್‌ನ್ನು ಯಾರು ಇಷ್ಟಪಡುವುದಿಲ್ಲ ಅದಕ್ಕಾಗಿ ಏನೆಲ್ಲಾ ಟ್ರೈ ಮಾಡ್ತಾರೆ. ಆದ್ರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದಕ್ಕೆ ಈ ಕೆಲವು ನೈಸರ್ಗಿಕ ವಸ್ತುಗಳನ್ನು ಟ್ರೈ ಮಾಡಿ.
ಆಲೂಗಡ್ಡೆ : ಆಲೂಗಡ್ಡೆಯಲ್ಲಿ  ನೈಸರ್ಗಿಕ ಬ್ಲೀಚಿಂಗ್ ಗುಣಗಳಿವೆ.  ಆಲೂಗಡ್ಡೆ ರಸವನ್ನು ತೆಗೆದು ಪ್ರಿಡ್ಜ್‌ನಲ್ಲಿಡಿ. ಸ್ವಲ್ಪ ಹೊತ್ತಿನ
ನಂತರ ಹತ್ತಿಯನ್ನು ತಂಪಾಗಿರುವ ಆಲೂಗಡ್ಡೆ ರಸದಲ್ಲಿ ಅದ್ದಿ ಕಣ್ಣಿಗೆ ಇಟ್ಟುಕೊಳ್ಳಿ. ೧೫ ನಿಮಿಷಗಳವರೆಗೆ ಇಟ್ಟು, ನಂತರ ತೊಳೆಯಿರಿ.
ಸೌತೆಕಾಯಿ: ಮುಳ್ಳು ಸೌತೆಯನ್ನು ವೃತ್ತಾಕಾರಕ್ಕೆ ಕತ್ತರಿಸಿ ಅದನ್ನು ಪ್ರಿಡ್ಜ್‌ನಲ್ಲಿಡಿ ನಂತರ ೧೦ ನಿಮಿಷಗಳ ವರೆಗೆ ಕಣ್ಣಿನ ಮೇಲೆ ಇಟ್ಟುಕೊಳ್ಳಿ.
ಗ್ರೀನ್ ಟೀ ಬ್ಯಾಗ್:ಕಣ್ಣಿನ ಡಾರ್ಕ್ ಸರ್ಕಲ್‌ನ್ನು ಹೋಗಲಾಡಿಸಲು ಗ್ರೀನ್ ಟೀ ಬ್ಯಾಗ್‌ನ್ನು ನೀರಿನಲ್ಲಿ ಮುಳುಗಿಸಿ ಪ್ರಿಡ್ಜ್‌ನಲ್ಲಿಟ್ಟುಬಿಡಿ. ನಂತರ ತೆಗೆದು ೧೫ ನಿಮಿಷಗಳವರೆಗೆ ಕಣ್ಣಿನ ಮೇಲೆ ಇಟ್ಟುಕೊಳ್ಳಿ.
ರೋಸ್ ವಾಟರ್: ರೋಸ್ ವಾಟರ್‌ನಲ್ಲಿ ಹತ್ತಿಯನ್ನು ಅದ್ದಿ ಕಣ್ಣಿನ ಮೇಲಿಟ್ಟುಕೊಳ್ಳಿ. ಹೀಗೆ ವಾರಕ್ಕೆರಡು ಬಾರಿ ಮಾಡುತ್ತಾ ಇರಿ, ಕಣ್ಣಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.


loading...

No comments