ಖಾಸಗಿ ಸುದ್ದಿ’ ವಾಹಿನಿ ಕ್ಯಾಮರಾಮನ್ ಕಾಮಕಾಂಡ
ಪೋಕ್ಸೋ ಕಾಯ್ದೆಯಡಿ ಕೇಸು
ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನಾದ ರಾಜ್ಯಮಟ್ಟದ `ಸುದ್ದಿ’ ವಾಹಿನಿಯೊಂದರ ಕ್ಯಾಮರಾಮನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಂಗಳೂರಿನ ವಿವಿಧ ಕೇಬಲ್ ಟೀವಿ ಚಾನೆಲುಗಳಲ್ಲಿ ಕ್ಯಾಮರಾಮನ್ ಆಗಿದ್ದ ಆರೋಪಿ ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸುದ್ದಿವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ.
ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಆರೋಪಿ 9ನೇ ತರಗತಿಯ ವಿದ್ಯಾರ್ಥಿನಿಗೆ ಪರಿಚಯವಾಗಿದ್ದು,ನಂತರ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿಕೊಂಡಿದ್ದ ಮತ್ತು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.
ಪ್ರಸ್ತುತ ವಿದ್ಯಾರ್ಥಿನಿ 5 ತಿಂಗಳ ಗರ್ಭಿಣಿಯಾಗಿದ್ದು, ಇದೇ ಕಾರಣಕ್ಕೆ ಈಕೆ ಶಾಲೆ ತೊರೆದಿದ್ದಳು. ವಿಷಯ ಬಹಿರಂಗವಾದೊಡನೆ ಸಂಬಂಧಪಟ್ಟವರು ವಿದ್ಯಾರ್ಥಿನಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.
ಶಾಲಾ ವಿದ್ಯಾರ್ಥಿನಿ ಮತ್ತು ಈಕೆಯ ತಾಯಿಗೆ ಶಾಲೆಯ ದೈಹಿಕ ಶಿಕ್ಷಕರೊಬ್ಬರು ಮನೆ ಬಾಡಿಗೆ ನೀಡಿದ್ದು, ಇದೇ ಮನೆಯಲ್ಲಿ ವಿದ್ಯಾರ್ಥಿನಿಯನ್ನು ಆರೋಪಿ ದುರ್ಬಳಕೆ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
k ale
loading...
No comments