Breaking News

ಹಲ್ಲೆಕೋರ ವಿಕೃತ ಕಾಮಿಯ ಬಂಧನ



ವಿಟ್ಲ : ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ನೋಡಿದ್ದನ್ನು ಪ್ರಶ್ನಿಸಿದ ಒಂದೇ ಕುಟುಂಬದ ಆರು ಜನರ ಮೇಲೆ ಕಲ್ಲು, ಹಾಗೂ ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಕುದ್ದುಪದವು ಕಾಟ್ರಸ್ ನಿವಾಸಿ ಪ್ರಕಾಶ್ ಬೆಳ್ಚಾಡ (೪೭) ಎಂಬಾತ ಬಂಧಿತ ಆರೋಪಿ. ಈತ ಮಾ.೧೭ ರಂದು ರಾತ್ರಿ ತನ್ನ ನೆರೆಮನೆಯಲ್ಲಿ ವಾಸವಿರುವ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಮರದ ಪೊದೆ ಬಳಿ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಗಮನಿಸಿ ಮನೆಯವರು ಹಾಗೂ ಪ್ರಕಾಶ್ ಬೆಳ್ಚಾಡನ ನಡುವೆ ಘರ್ಷನೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಆರೋಪಿ ಪ್ರಕಾಶ್ ತನ್ನಲ್ಲಿದ್ದ ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಮನೆಯವರ ಮೇಲೆ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಅಮ್ಮು ಪೂಜಾರಿ(೬೫), ಆತನ ಪತ್ನಿ ಲಲಿತಾ(೬೦), ಪುತ್ರ ರಮೇಶ(೪೨) ಆತನ ಪತ್ನಿ ಅರುಣ(೩೮), ಸಹೋದರಿ ರಾಜೀವಿ(೨೬) ಎಂಬವರು ಹಲ್ಲೆಗೊಳಗಾಗಿದ್ದು, ಪುತ್ತೂರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.


loading...

No comments