Breaking News

ಬೆಂಗಳೂರಿನಲ್ಲಿ 15 ವರ್ಷ ಪೂರೈಸಿರುವ ವಾಹನಗಳಿಗೆ ನಿಷೇಧ ?


ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದಿನೇ ದಿನೇ ಹೆಚ್ಚುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ, ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ. ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿ ಕೂಡಾ ವಿಷಕಾರಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗ ಇದಕ್ಕೆಲ್ಲಾ ಬ್ರೇಕ್​ ಹಾಕಲು ಸಾರಿಗೆ ಇಲಾಖೆ ಹೊಸ ಮಾಸ್ಟರ್​ ಪ್ಲಾನ್ ರೆಡಿ ಮಾಡುತ್ತಿದೆ.
ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ  ವಾಯುಮಾಲಿನ್ಯದಿನೇ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ, ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ. ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿ ಕೂಡಾ ವಿಷಕಾರಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈಗ ಇದಕ್ಕೆಲ್ಲಾ ಬ್ರೇಕ್​ ಹಾಕಲು ಸಾರಿಗೆ ಇಲಾಖೆ ಹೊಸ ಮಾಸ್ಟರ್​ ಪ್ಲಾನ್ ರೆಡಿ ಮಾಡುತ್ತಿದೆ.
ಬೆಂಗಳೂರು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದ್ರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ನಗರದ ಪರಿಸರವನ್ನ ಹಾಳು ಮಾಡುತ್ತಲೇ ಇದೆ.
ಹಳೆ ವಾಹನಗಳಿಗೆ ನಿಷೇಧ!
ಬೆಂಗಳೂರಿನಲ್ಲಿ ಜನ ಉಸಿರಾಡುವ ಗಾಳಿಯೂ ವಿಷಕಾರಿಯಾಗುತ್ತಿದೆ. ಈಗ ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆ 15 ವರ್ಷ ಪೂರೈಸಿರುವ ಹಳೆ ವಾಹನಗಳನ್ನ ಬ್ಯಾನ್ ಮಾಡವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಾರಿಗೆ ಇಲಾಖೆಯ ಪ್ರಸ್ತಾವನೆ ಪ್ರಕಾರ ನಗರದಲ್ಲಿರುವ ಸಾರಿಗೆ ವಾಹನಗಳಾದ ಬಸ್​,ಲಾರಿ,ಟೆಂಪೋ, ಆಟೋ, ಮ್ಯಾಷ್ಸಿ ಕ್ಯಾಬ್​ ಹೀಗೆ 15 ವರ್ಷ ಪೂರೈಸಿರುವ ವಾಹನಗಳನ್ನ ಬ್ಯಾನ್​ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ನಗರದಲ್ಲಿ ಸಾರಿಗೆ ವಾಹನಗಳ ಸಂಖ್ಯೆ 6 ಲಕ್ಷದ ಗಡಿ ದಾಟಿದ್ದು, ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಹನಗಳು 15 ವರ್ಷ ದಾಟಿರುವ ವಾಹನಗಳಾಗಿವೆ.
ಒಂದು ವೇಳೆ ಈ ಪ್ರಸ್ತಾವನೆಗೆ ಸರ್ಕಾರ ಗ್ರಿನ್​ ಸಿಗ್ನಲ್​ ನೀಡಿದರೆ, ಎಲ್ಲಾ ಹಳೇ ವಾಹನಗಳು ಬೆಂಗಳೂರನ್ನ ಬಿಡಬೇಕಾಗುತ್ತೆ. ಇಲ್ಲವಾದ್ರೆ ಗುಜುರಿಗೆ ಹಾಕಬೇಕು.

loading...

No comments