Breaking News

ಬೆಲೆ ಏರಿಕೆ: ಮನೆಗಳ ಬೆಲೆ ದುಬಾರಿ


ಬೆಂಗಳೂರು : ಕಳೆದ ಕೆಲವು ತಿಂಗಳಿಂದ ಉಕ್ಕಿನ ಬೆಲೆ ಶೇ. ೩೦ರಷ್ಟು ಹೆಚ್ಚಳವಾಗಿದ್ದು, ಇನ್ನೂ ಇತರೆ ಉತ್ಪನ್ನಗಳ ಬೆಲೆ ಶೇ.೩೦ರಷ್ಟು ಹೆಚ್ಚಳವಾಗಲಿರುವುದರಿಂದ ಮನೆ ಕಟ್ಟುವವರಿಗೆ ದೊಡ್ಡ ಹೊಡೆತ ಬೀಳಲಿದೆ.

ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಸಿಮೆಂಟ್ ಮತ್ತು ಮರಳಿನ ಬೆಲೆ ಶೇ. ೨೦ರಷ್ಟು ಜಾಸ್ತಿಯಾಗಿದೆ. ಉದ್ದೇಶಿತ ಆರ್‌ಇಆರ್‌ಎ ಮಸೂದೆ ಏಪ್ರಿಲ್ ೩೦ ರಂದು ಜಾರಿಗೆ ಬರಲಿದ್ದು, ಇದರ ಪ್ರಕಾರ ರಿಯಲ್ ಎಸ್ಟೇಟ್ ಡೆವಲಪರ್‌ಗಳು ನಿಗದಿತ ಸಮಯದಲ್ಲಿ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಖಾತೆಯನ್ನು ತೆರೆಯಬೇಕು.

ಸ್ಟೀಲ್ ಮತ್ತು ಸಿಮೆಂಟ್ ಬೆಲೆ ಹೆಚ್ಚಳ, ಅಗತ್ಯ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಮತ್ತು ಆರ್‌ಇಆರ್‌ಎ ಮಸೂದೆಯಿಂದಾಗಿ ರಿಯಲ್ ಎಸ್ಟೇಟ್ ಬೆಲೆಗಳು ಏಪ್ರಿಲ್ ೨೦೧೭ರಿಂದ ಹೆಚ್ಚಳವಾಗಲಿದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದ್ದು, ಅವರು ಖರೀದಿಸುವ ಮನೆಗಳು ದುಬಾರಿಯಾಗಲಿವೆ.

loading...

No comments