Breaking News

21 ಸಾವಿರ ಕುಡುಕ ಚಾಲಕರ ಲೈಸೆನ್ಸ್ ರದ್ದು


ಬೆಂಗಳೂರು: ಕಳೆದ ೨ ವರ್ಷಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಸುಮಾರು ೨೧,೦೦೭ ಮಂದಿ ಚಾಲಕರ ವಾಹನ ಚಾಲನಾ ಪರವಾನಗಿಯನ್ನು ಸಂಚಾರ ಪೊಲೀಸರು ಅಮಾನತುಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ಸಂಚಾರ ಪೊಲೀಸರು ನಗರದ ವಿವಿಧ ವಿಭಾಗಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ೩೨,೭೫೬ ಚಾಲಕರ ವಾಹನ ಚಾಲನಾ ಪರವಾನಗಿಯನ್ನು ಅಮಾನತುಪಡಿಸಲಾಗಿದೆ ಅದರಲ್ಲಿ ೨೧,೦೦೭ ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರಾಗಿದ್ದಾರೆ ಎಂದು ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.

೨೦೧೫ ಕ್ಕೆ ಹೋಲಿಸಿದರೇ ೨೦೧೭ ರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿವೆ. ೧೪,೯೯೪ ರಿಂದ ೧೭,೭೬೨ ಕ್ಕೇರಿದ್ದು ನಗರದಲ್ಲಿ ಅಪಘಾತ ಪ್ರಕರಣಗಳು ಕೂಡ ಹೆಚ್ಚಿವೆ. ೨೦೧೫ ರಲ್ಲಿ ೪,೮೨೮ ರಷ್ಟು ಇದ್ದದ್ದು ೨೦೧೬ ರಲ್ಲಿ ೭,೫೦೬ಕ್ಕೇರಿದೆ. ಸುಪ್ರೀಂ ಕೋರ್ಟ್ ಸಂಚಾರಿ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ಗಳನ್ನು ೩ ತಿಂಗಳ ಕಾಲ ಅಮಾನತುಗೊಳಿಸುವಂತೆ ಹೇಳಿದೆ.

ಅಧಿಕ ವೇಗ, ಸಿಗ್ನಲ್ ಜಂಪ್, ಓವರ್ ಲೋಡಿಂಗ್, ಸರಕು ವಾಹನಗಳಲ್ಲಿ ಜನರ ಪ್ರಯಾಣ, ಮಧ್ಯ ಸೇವನೆ, ಮಾದಕ ವಸ್ತು ಸೇವನೆ ಮತ್ತು ಮೊಬೈಲ್ ಬಳಕೆ ಮಾಡಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

loading...

No comments