Breaking News

ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 2,200 ಕೋಟಿ ಮೀಸಲು


ಮಂಗಳೂರಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ಹಜ್‌ ಭವನ ನಿರ್ಮಾಣ 
 ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯ ಕಾರ್ಯಕ್ರಮ ಜಾರಿ

  
ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಈ ಬಾರಿ ಬಜೆಟ್‌ನಲ್ಲಿ ₹ 2,200 ಕೋಟಿ ಮೀಸಲಿಡಲಾಗಿದೆ.

ಪ್ರಮುಖಾಂಶಗಳು
* ವಕ್ಫ್ ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ಪ್ರಾರಂಭ
* ಶಾಲೆಗಳಿಂದ ಹೊರ ಉಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಮುಂದಿನ 2 ವರ್ಷಗಳಲ್ಲಿ ಈಗಾಗಲೇ ಮುಚ್ಚಿರುವ ಸರ್ಕಾರಿ ಉರ್ದು ಶಾಲೆ ಜಾಗದಲ್ಲಿ 200 ಮೌಲಾನ ಆಜಾದ್ ಮಾದರಿ ಶಾಲೆಗಳ ಪ್ರಾರಂಭ

* ಬೆಂಗಳೂರು ಹಾಗೂ ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ತಲಾ ₹ 2 ಕೋಟಿ ವೆಚ್ಚದಲ್ಲಿ 10 ಉದ್ಯೋಗಸ್ಥ ಮಹಿಳಾ ವಸತಿ ನಿಲಯ ಪ್ರಾರಂಭ
* ಶಾದಿಮಹಲ್ ಯೋಜನೆಯಡಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ₹ 2 ಕೋಟಿ ಮತ್ತು ಇತರೆ ಪ್ರದೇಶಗಳಲ್ಲಿ ₹ 1 ಕೋಟಿ ಅನುದಾನದಲ್ಲಿ ಇಲಾಖಾ ವತಿಯಿಂದಲೇ ಶಾದಿಮಹಲ್ / ಸಮುದಾಯ ಭವನ ಕಟ್ಟಡ ನಿರ್ಮಿಸಿ ವಕ್ಫ್ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಕ್ರಮ

* ಅನಾಥಾಲಯ, ವೃದ್ಧಾಶ್ರಮ, ಹೆಚ್.ಐ.ವಿ / ಏಡ್ಸ್ ರೋಗಿಗಳು ಮತ್ತು ವಿಕಲ ಚೇತನ ವ್ಯಕ್ತಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕ್ರಿಶ್ಚಿಯನ್ ಸಂಸ್ಥೆಗಳ ಜೊತೆಗೆ ಇತರೆ ಅಲ್ಪಸಂಖ್ಯಾತರ ಸಮುದಾಯದ ಸಂಸ್ಥೆಗಳಿಗೂ ನೆರವು
* ಐಐಎಂ, ಐಐಟಿ, ಐಐಎಸ್‌ಸಿ ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಬಾರಿ ತಲಾ ₹ 2 ಲಕ್ಷ ಪ್ರೋತ್ಸಾಹಧನ ವಿತರಣೆ

* ಗುರು ಗೋವಿಂದ ಸಿಂಗ್‍ಜೀರವರ 350ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕಾಗಿ ಹಾಗೂ ಸಿಖ್ ಸಮುದಾಯದ ಸಂಸ್ಕøತಿ ಮತ್ತು ಪರಂಪರೆ ಸಂರಕ್ಷಿಸಲು ಬೀದರ್‌ನಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆಗೆ ₹ 5 ಕೋಟಿ ಮೀಸಲು
* ಸಿಖ್ ಸಮುದಾಯದ ಗುರುದ್ವಾರಗಳ ಜೀರ್ಣೋದ್ಧಾರಕ್ಕಾಗಿ ತಲಾ ₹ 10 ಲಕ್ಷ ಸಹಾಯಧನ
* ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ ₹ 175 ಕೋಟಿ ಅನುದಾನ, ಈಗಾಗಲೇ ಜಾರಿಯಲ್ಲಿರುವ ಯೋಜನೆಗಳೊಂದಿಗೆ ಸ್ಮಶಾನಕ್ಕೆ ಗೋಡೆ ಮತ್ತು ಮೂಲ ಸೌಕರ್ಯ ಒದಗಿಸಲು ಕ್ರಮ

* ಅಲ್ಪಸಂಖ್ಯಾತರ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಪತ್ರಿಕೋದ್ಯಮ ತರಬೇತಿ, ಐಐಟಿ, ಐಐಎಂ ಪದವಿ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
* ಅಲ್ಪಸಂಖ್ಯಾತರ ಸಮುದಾಯದ 1000 ಅಭ್ಯರ್ಥಿಗಳಿಗೆ ಸೇನೆಯಲ್ಲಿ ನೇಮಕಾತಿ ಪಡೆಯಲು ಪೂರ್ವಭಾವಿ ತರಬೇತಿ
* ಮೈಸೂರಿನ ಮುಸ್ಲಿಂ ಬಾಲಕ ಹಾಗೂ ಬಾಲಕಿಯರ ಅನಾಥಾಲಯ ಸಂಸ್ಥೆಗೆ ಶೈಕ್ಷಣಿಕ ಮತ್ತು ಮೂಲ ಸೌಕರ್ಯಕ್ಕೆ ₹ 2 ಕೋಟಿ ಅನುದಾನ
* ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಗಮಲ್ಲದಲ್ಲಿರುವ ಧಾರ್ಮಿಕ ಯಾತ್ರಾಸ್ಥಳದ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ₹ 2 ಕೋಟಿ

* ಪೇಷ್‌ ಇಮಾಮ್‌ರವರ ಗೌರವಧನ ₹ 4 ಸಾವಿರ ಮತ್ತು ಮೌಜನ್‌ರವರ ಗೌರವಧನ ₹ 3 ಸಾವಿರಕ್ಕೆ ಏರಿಕೆ
* ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ₹ 800 ಕೋಟಿ ಅನುದಾನ
* ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯ ಕಾರ್ಯಕ್ರಮ ಜಾರಿ

* ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ ₹ 4 ಸಾವಿರಕ್ಕೆ ಹೆಚ್ಚಳ
-prajanvani

loading...

No comments