ನರೇಶ್ ಶೆಣೈಗೆ ಶಿಕ್ಷೆಯಾಗುವಂತೆ ಸಾಮೂಹಿಕ ಪ್ರಾರ್ಥನೆ
ಮಂಗಳೂರು:ಮಾಹಿತಿಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ನಿನ್ನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಾಳಿಗಾ ಸಹೋದರಿಯರು ವೆಂಕಟರಮಣನಿಗೆ ಕೈ ಮುಗಿದು, ಕೊಲೆ ಆರೋಪಿ ನರೇಶ್ ಶೆಣೈಗೆ ಶಿಕ್ಷೆಯಾಗುವಂತೆ ಪ್ರಾರ್ಥನೆ ಮಾಡಿದರು. ಬಳಿಕ ವೆಂಕಟರಮಣ ದೇವಾಲಯದಿಂದ ವಿನಾಯಕ ಬಾಳಿಗಾ ಮನೆವರೆಗೆ ವಿಚಾರವಾದಿ ನರೇಂದ್ರ ನಾಯಕ್ ನೇತೃತ್ವದ ‘ದೇಶ ಪ್ರೇಮಿ ಸಂಘಟನೆ’ ಮತ್ತು ಇತರ ಸಂಘಟನೆಗಳ ಸದಸ್ಯರು ಮೌನ ಮೆರವಣಿಗೆ ನಡೆಸಿದರು.
ಬಾಳಿಗಾ ಅವರ ಹೆಜ್ಜೆಗೆ ನಮ್ಮ ಹೆಜ್ಜೆಯನ್ನು ಸೇರಿಸುವ ಮೂಲಕ ಬಾಳಿಗಾ ಕುಟುಂಬದ ಜೊತೆ ನಿಲ್ಲಬೇಕಿದೆ. ಕೊಲೆಗಡುಕರ ವಿರುದ್ದ ಮಂಗಳೂರಿನ ಜನಸಾಮಾನ್ಯರ ಪ್ರತಿರೋಧದ ದ್ವನಿಯನ್ನು ಗಟ್ಟಿಯಾಗಿ ಮೊಳಗಿಸಬೇಕಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಈ ಸಂದರ್ಭ ಹೇಳಿದರು. ಬಾಳಿಗಾ ಕೊಲೆ ಪ್ರಕರಣದಲ್ಲಿ ನಮೋ ಬ್ರಿಗೇಡ್ ಸ್ಥಾಪಕ ನಮೋ ನರೇಶ್ ಶೆಣೈ ಪ್ರಧಾನ ಆರೋಪಿಯಾಗಿದ್ದು, ಶಿಕ್ಷೆಯಾಗಬೇಕು ಎಂದು ಈ ಸಂದರ್ಭ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
loading...
No comments