ಹಾಸ್ಟೆಲ್ ವಿದ್ಯಾರ್ಥಿನಿಯರ ಒಳಉಡುಪು ಧರಿಸಿ ವಿಕ್ರತವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿ ಒಳ ಉಡುಪು ಕದ್ದೊಯ್ಯುತ್ತಿದ್ದ ಯುವಕನನ್ನು ಬುಧವಾರ ಬಂಧಿಸಲಾಗಿದೆ.ಬಂಧಿತ ವಿಕೃತ ಕಾಮಿಯನ್ನು ಅಬು ತಾಲಿಮ್(24 ವರ್ಷ) ಎಂದು ಗುರುತಿಸಲಾಗಿದೆ .
ರಾತ್ರಿ ಹಾಸ್ಟೆಲ್‌ಗೆ ಬೆತ್ತಲೆಯಾಗಿ ಬಂದು ಯುವತಿಯರು ಒಣಗಲು ಹಾಕಿರುವ ಒಳ ಉಡುಪುಗಳನ್ನು ಧರಿಸಿ ಖುಷಿಪಡುತ್ತಿದ್ದ.ಹುಡುಗಿಯರಂತೆ ನಡೆಯುವುದು, ನಾಚುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾ ಕಾಟ ಕೊಡುತ್ತಿದ್ದ ಯುವಕನನ್ನು ಪೊಲೀಸರ ವಿಶೇಷ ತಂಡ ನಗರದಲ್ಲಿ ಬಂಧಿಸಿದೆ.
ಘಟನೆ ಸಂಬಂಧ ಹಾಸ್ಟೆಲ್‌ನ ವಾರ್ಡನ್ ಸುಮಿತ್ರಾ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದರು.
loading...
No comments