ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಅಂತೇ ?
ಕಾರ್ಕಳ : “ಹೆಬ್ರಿ ತಾಲೂಕು ರಚನೆ ಬಗ್ಗೆ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ಸರಿಯಾಗಿಯೇ ಇದೆ. ಕ್ಷೇತ್ರದಲ್ಲಿ ನಡೆಯುವ ಸರಕಾರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಫ್ಲೆಕ್ಸ್ ಹಾಕಿ ತನ್ನದ್ದೇ ಸಾಧನೆ ಎಂದು ಬಿಂಬಿಸುವ ಶಾಸಕ ಸುನಿಲ್ ಬಜೆಟ್ ಘೋಷಣೆಯ ಸಂದರ್ಭದಲ್ಲಿ ಈ ಪ್ರಸ್ತಾವನೆಯನ್ನು ಕೈಬಿಟ್ಟಿರುವುದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿ ಹೇಳಿದ್ದಾರೆ
ಹೆಬ್ರಿ ತಾಲೂಕು ರಚನೆಗಾಗಿ ಮುಂದಿನ ದಿನಗಳಲ್ಲಿ ಪಕ್ಷಾತೀತ ಹೋರಾಟವನ್ನು ಕೈಬಿಟ್ಟು ಕಾಂಗ್ರೆಸ್ ತನ್ನದ್ದೇ ನೆಲೆಯಲ್ಲಿ ಹೋರಾಟ ನಡೆಸಲಿದೆ. ಮಾಜಿ ಶಾಸಕ ಎಚ್ ಗೋಪಾಲ ಭಂಡಾರಿಯವರು ಈಗಾಗಲೇ ಮುಖ್ಯಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಆದಾಗ್ಯೂ ತಾಲೂಕು ರಚನೆಯ ಘೋಷಣೆಯಾಗುವವರೆಗೆ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.
loading...
No comments