ಫೇಸ್ಬುಕ್ ವಾಟ್ಸ್ ಅಪ್ ನಲ್ಲಿ ನನ್ನನು ತೇಜೋವಧೆ ಮಾಡುತ್ತಿದ್ದಾರೆ
ಮಂಗಳೂರು : ವಾಟ್ಸಪ್, ಫೇಸ್ಬುಕ್ ಅಂತರ್ಜಾಲ ತಾಣದಲ್ಲಿ ನನ್ನ ವಿರುದ್ಧ ಪ್ರಕಟವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರ ಎಂದು ಬಿಜೆಪಿ ಮುಖಂಡ ರಹೀಂ ಉಚ್ಚಿಲ್ ಹೇಳಿದ್ದಾರೆ .
“ಉಡುಪಿಯಲ್ಲಿ ನಡೆದಿದ್ದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹೋಗಿದ್ದ ಸಂದರ್ಭದಲ್ಲಿ ನಾನು ಉಡುಪಿ ಪೇಜಾವರ ಮಠಕ್ಕೆ ತೆರಳಿ ಪೇಜಾವರರನ್ನು ಭೇಟಿ ಮಾಡಿದ್ದೆ. ಶ್ರೀ ಮೇಲೆ ಅಪಾರ ಗೌರವ ಇದ್ದ ನಾನು ಅವರ ಆಶೀರ್ವಾದ ಬೇಡಿದ ಸಂದರ್ಭದಲ್ಲಿ ಅವರು ನನ್ನನ್ನು ಶಾಲು ಹೊದಿಸಿ ಹರಸಿದ್ದರು. ಈ ವಿಚಾರವನ್ನು ನಾನು ಫೋಟೋ ಸಮೇತ ಫೇಸ್ಬುಕ್ಕಿಗೆ ಅಪ್ಲೋಡ್ ಮಾಡಿದ್ದೆ. ಆದರೆ ಈ ಫೋಟೋವನ್ನು ಇದೀಗ ಕೆಲವರು ತೆಗೆದು ರಹೀಂ ಉಚ್ಚಿಲ್ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ನಿಂದನೆ ಮಾಡಿದ್ದಾರೆ” ಎಂದು ಹೇಳಿದರು.
ನಾನು ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದು, ನನ್ನ ಧರ್ಮದ ಮೇಲೆ ಬಹಳ ಗೌರವ ಹೊಂದಿದ್ದೇನೆ. ಆದರೆ ವಾಟ್ಸಪ್ಪಿನಲ್ಲಿ ಬರುತ್ತಿರುವ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದರು.
loading...
No comments