Breaking News

ಮದ್ರಸಾ ಶಿಕ್ಷಕನ ಹತ್ಯೆ ಕ್ರೈಂ ಬ್ರಾಂಚ್‌ನಿಂದ ತನಿಖೆ ಆರಂಭ



ಕಾಸರಗೋಡು :  ಮದ್ರಸಾ ಶಿಕ್ಷಕ ರಿಯಾಝ್ ಕೊಲೆ ಪ್ರಕರಣದ ಬಗ್ಗೆ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಕಣ್ಣೂರು ಕ್ರೈಂ ಬ್ರಾಂಚ್ ಎಸ್.ಪಿ.ಶ್ರೀನಿವಾಸ್ ನೇತೃತ್ವದ ತಂಡವು ಘಟನಾ ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದೆ. ರಿಯಾಝ್ ಕೊಲೆಗೀಡಾದ ಸ್ಥಳಕ್ಕೆ ಸಂದರ್ಶಿಸಿದ ತನಿಖಾ ತಂಡ ಪರಿಶೀಲನೆ ನಡೆಸಿದ್ದು, ಆರೋಪಿಗಳು ಬಂದಿರಬಹುದಾದ ದಾರಿ, ಪರಾರಿಯಾಗಲು ಬಳಸಿದ ದಾರಿ ಮೊದಲಾದವುಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆಗೆ ಸೈಬರ್ ಸೆಲ್, ಬೆರಳಚ್ಚು ತಜ್ಞರ ನೆರವು ಕೋರಲಾಗುವುದು ಎಂದು ತನಿಖಾ ತಂಡ ತಿಳಿಸಿದ್ದು, ಹಂತಕರ ಬಗ್ಗೆ ಸುಳಿವು ಇದುವರೆಗೆ ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

 ಕಾಸರಗೋಡು ನಗರ ಹಾಗೂ ಪರಿಸರ ಪ್ರದೇಶಗಳಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಒಟ್ಟು ೯ ಕೇಸ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ೧೮ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

loading...

No comments