ಅಂಜೂರ ಹಣ್ಣನ್ನು ಮನೆ ಮದ್ದು ಆಗಿ ಉಪಯೋಗಿಸಿ
ಈ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಶಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ.
- ಮಕ್ಕಳು ಗಾಜಿನ ತುಂಡು , ಪಿನ್ನು ಮುಂತಾದವುಗಳನ್ನು ನುಂಗಿದ್ದರೆ, ಈ ಹಣ್ಣನ್ನು ತಿನ್ನಿಸಿದರೆ ಅದು ಮಲದಲ್ಲಿ ಹೊರಹೋಗುವುದು
- 2-3 ಹಣ್ಣುಗಳನ್ನು ದಿನನಿತ್ಯವೂ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲದಿನಗಳಲ್ಲಿ ಮಲಬದ್ಧತೆ ದೂರವಾಗುತ್ತದೆ.
- 5-6 ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ ಒಂದು ಪಾವು ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗಿ ರಕ್ತವೃದ್ಧಿಯಾಗುತ್ತದೆ.
- ಅಂಜೂರದ ರಸವನ್ನು ಸೇವಿಸುವುದರಿಂದ ಉಷ್ಣ ಪೀಡತೆಯಿಂದ ಮುಕ್ತಿ ಹೊಂದಬಹುದು.
ಶ್ವಾಶಕೋಶದ ತೊಂದರೆಯಿರುವವರು ೫ ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟಿಕೊಂಡು ಬೆಳಗ್ಗೆ- ಸಂಜೆ ಸೇವಿಸುವುದರಿಂದ ತೊಂದರೆಗಳು ದೂರವಾಗುತ್ತವೆ.
loading...
No comments