Breaking News

ಬಿಜೆಪಿಗೆ 500 ಕೋಟಿ ಕೊಡ್ತಾರಂತೆ ಜರ್ನಾದನ ರೆಡ್ಡಿ :ಹೆಚ್'ಡಿಕೆಬೆಂಗಳೂರು: ಇಡೀ ದೇಶದಲ್ಲೇ ಸದ್ದು ಮಾಡಿದ್ದ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಗಳು ಒಬ್ಬೊಬ್ಬರಾಗಿ ಖುಲಾಸೆಗೊಳ್ಳುತ್ತಾ ಹೋಗುತ್ತಿದ್ದಾರೆ. ಅದರಲ್ಲೂ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಇದ್ದ ಇಡಿ ಕೇಸ್ ವಜಾಗೊಂಡಿದೆ. ಈ ಕುರಿತಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೆಚ್'ಡಿಕೆ ಹೊಸ ಬಾಂಬ್!
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಧನಾ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿಗೆ ಶಾಕ್ ನೀಡುವಂತ ಹೇಳಿಕೆಯನ್ನು ನೀಡಿದ್ದಾರೆ.ಮುಂದಿನ ವಿಧಾನಸಭೆಗೆ ಇನ್ನು ಹತ್ತು ತಿಂಗಳು ಮಾತ್ರ ಬಾಕಿಯಿದೆ.ಈ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಬರೋಬ್ಬರಿ 150 ಸೀಟು ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಇತ್ತ ತನ್ನ ವಿರುದ್ಧ ದಾಖಲಾಗಿರುವ ಕೇಸ್ ಗಳಲ್ಲಿ ಮುಕ್ತಿ ಪಡೆಯಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಂತೆ. ತನ್ನ ವಿರುದ್ಧದ ಕೇಸ್ ಗಳಿಂದ ಖುಲಾಸೆಗೊಳಿಸಿದರೆ, ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಪಕ್ಷಕ್ಕೆ 500 ಕೋಟಿ ರೂಪಾಯಿ ಕೊಡಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆಪಾದನೆ ಮಾಡಿದ್ದಾರೆ.
-suvrana news

loading...

No comments