ಬಾಬ್ರಿ ಮಸೀದಿಯನ್ನು ದೇಶದ ಯಾವುದೇ ಭಾಗದಲ್ಲಿ ಕಟ್ಟಲು ಬಿಡುವುದಿಲ್ಲ- ವಿಎಚ್‌ಪಿ
ಮೀರತ್: ಬಾಬ್ರಿ ಮಸೀದಿಯನ್ನು ದೇಶದ ಯಾವುದೇ ಭಾಗದಲ್ಲಿ ಕಟ್ಟಲು ಬಿಡುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಘೋಷಿಸಿದೆ.
ರಾಮಮಂದಿರ ವಿವಾದವನ್ನು ಕೋರ್ಟಿನಾಚೆ ಸಂಬಂಧಪಟ್ಟವರೆಲ್ಲಾ ಸೇರಿ ಬಗೆಹರಿಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿರುವ ಬೆನ್ನಲ್ಲೆ ವಿಎಚ್‌ಪಿಯ ಈ ಹೇಳಿಕೆ ಪ್ರಕಟವಾಗಿದೆ.
ಬಾಬರ್ ಮುಸ್ಲಿಮರ ದೇವತೆಯೇನಲ್ಲ. ಆತನ ಮಸೀದಿಯನ್ನು ದೇಶದಲ್ಲಿ ಕಟ್ಟುವುದು ಸರಿಯಲ್ಲ. ಅವನು ಭಾರತವನ್ನು ಲೂಟಿ ಹೊಡೆದಿದ್ದಾನೆ. ಮಾತ್ರವಲ್ಲ ಬಲವಂತವಾಗಿ ಜನರನ್ನು ಇಸ್ಲಾಂಗೆ ಬೇಕೆಂದೇ ಮತಾಂತರಿಸಿದ್ದಾನೆ.
ಆದ್ದರಿಂದ ಆತನ ಹೆಸರಿನಲ್ಲಿ ಯಾವುದೇ ಮಸೀದಿ ನಿರ್ಮಾಣಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಾವು ಮುಸ್ಲಿಮರ ವಿರೋಧಿಗಳೇನಲ್ಲ, ಅಯೋಧ್ಯೆಯ ಪರಿಕ್ರಮದ ಆಚೆಗೆ ಮಸೀದಿಯನ್ನು ಕಟ್ಟಿಕೊಳ್ಳಬಹುದು. ಆದರೆ ಬಾಬರ್ ಹೆಸರಲ್ಲಿ ಯಾವುದೇ ಮಸೀದಿ ಕಟ್ಟಲು ಅವಕಾಶ ಕೊಡುವುದಿಲ್ಲವೆಂದು ವಿಎಚ್‌ಪಿ ಯುವ ವಿಭಾಗ ಭಜರಂಗದಳದ ಯುಪಿ ರಾಜ್ಯ ಸಂಚಾಲಕ ಬಲರಾಜ್ ದಂಗರ್ ಹೇಳಿದ್ದಾರೆ.
ರಾಮೋತ್ಸವ ಸಂಕಲ್ಪ ಸಭೆಗಳು ದೇಶಾದ್ಯಂತ ಆರಂಭವಾಗಿರುವ ಸಂದರ್ಭದಲ್ಲೇ ಈ ಹೇಳಿಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಜಾಗೃತಿಯನ್ನು ಮೂಡಿಸಲು ಈ ಸಭೆಗಳು ಪ್ರಯತ್ನಿಸುತ್ತವೆ.
ಏ. 11ರವರೆಗೂ ಈ ಸಭೆಗಳು ನಡೆಯುತ್ತವೆ. ಱ್ಯಾಲಿ ಮತ್ತು ಆರತಿಗಳನ್ನು ಈ ಸಭೆಗಳಲ್ಲಿ ಏರ್ಪಡಿಸಲಾಗಿದೆ.
ಈ ವಿವಾದವನ್ನು ಕೋರ್ಟಿನಾಚೆ ಪರಿಹರಿಸಿಕೊಳ್ಳಲು ನಾವು ಸಿದ್ಧ. ಆದರೆ, ಪ್ರತಿವಾದಿಗಳು ಇದಕ್ಕೆ ಒಪ್ಪುವುದಿಲ್ಲ. ನಾವು ಬಾಬ್ರಿ ಮಸೀದಿ ಕಟ್ಟುವುದಕ್ಕೆ ಬಿಡುವುದಿಲ್ಲ. ಈಗ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಹಿಂದೂ ಸರ್ಕಾರವಿದೆ.
ಗುಜರಾತ್‌ನಲ್ಲಿ ಸೋಮನಾಥ ದೇವಾಲಯ ಕಟ್ಟಲು ಮಸೂದೆ ಮಾಡಿದಂತೆ ರಾಮಮಂದಿರ ನಿರ್ಮಾಣಕ್ಕೂ ಅಂತಹುದೇ ಕಾನೂನು ಜಾರಿಗೆ ತರಬೇಕೆಂದು ವಿ.ಎಚ್.ಪಿ ವಕ್ತಾರ ಶೀಲೇಂದ್ರ ಚೌಹಾಣ್ ಹೇಳಿದ್ದಾರೆ.
ಹಿಂದೂ ನಂಬಿಕೆಗಳ ಪ್ರಕಾರ ತ್ರೇತಾಯುಗದಲ್ಲಿ ಅಯೋಧ್ಯೆಯ ರಾಜ ಯುಪಿಎ ಬಸ್ತಿ ಜಿಲ್ಲೆಯ ಮಕುರಹ ಎಂಬಲ್ಲಿ ಯಜ್ಞ ಮಾಡಿದ್ದ. ಅದರ ವ್ಯಾಪ್ತಿಯಲ್ಲಿ 6 ಜಿಲ್ಲೆಗಳು ಬರುತ್ತವೆ. ಇದನ್ನೇ 84 ಕೋಸಿ ಪರಿಕ್ರಮ ಎಂದು ಕರೆಯಲಾಗುತ್ತಿದೆ.
ರಾಮಮಂದಿರ ಕಟ್ಟಲು ಹಣಕ್ಕೇನೂ ಕೊರತೆಯಿಲ್ಲ. ಈಗಾಗಲೇ ನಮ್ಮ ಬಳಿ 8 ಕೋಟಿ ರೂ.ಗಳನ್ನು ಬಾಬ್ರಿ ಮಸೀದಿ ಕೆಡವಿದ ನಂತರ ಸಂಗ್ರಹಿಸಲಾಗಿದೆ. ಈಗ ದೆಹಲಿ ಮತ್ತು ಲಕ್ನೋದಲ್ಲಿ ಸುಲಭವಾಗಿದ್ದು, ಇದಾದರೆ ದೇಗುಲ ಕಟ್ಟುವುದಕ್ಕೆ ಬಹಳ ಕಾಲ ಬೇಕಾಗಿಲ್ಲವೆಂದು ಮೀರತ್‌ನ ವಿಎಚ್‌ಪಿ ಕಾರ್ಯದರ್ಶಿ ಹೇಳಿದ್ದಾರೆ.
-sanjevani
loading...
No comments