ಶಕುಂತಳಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಬ್ಯಾನರ್ ಹರಿದ ಕಿಡಿಗೇಡಿಗಳು
ವಿಟ್ಲ : ಶಾಸಕಿ ಶಕುಂತಳಾ ಶೆಟ್ಟಿಯ 70ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕಾರ್ಯಕರ್ತರು ಹಾಕಿದ್ದ ಬ್ಯಾನರನ್ನು ಕಿಡಿಗೇಡಿಗಳು ದ್ವಂಸಗೊಳಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಪುತ್ತೂರಿನ ಜೈನ ಮಂದಿರದಲ್ಲಿ ಶಾಸಕಿ ಶಕುಂತಳಾ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಬುಧವಾರದಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಬ್ಯಾನರನ್ನು ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಿಟ್ಲದ ಅಲ್ಲಲ್ಲಿ ಹಾಗೂ ಹೃದಯ ಭಾಗದ ನಾಲ್ಕು ರಸ್ತೆಯ ಬದಿಯಲ್ಲಿಯೂ ಅಳವಡಿಸಿದ್ದಾರೆ. ಶಾಸಕಿ ಮೇಲಿನ ದ್ವೇಷಕ್ಕಾಗಿಯೋ ಅಥವಾ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲೆಂದೇ ಜನ್ಮತಾಳಿದ್ದ ಅದ್ಯಾರೋ ಕಿರಾತಕರು ಬ್ಯಾನರನ್ನು ಹರಿದಿದ್ದಾರೆ. ಆದರೆ ಬ್ಯಾನರಿನ ಪಕ್ಕದಲ್ಲೇ ಭದ್ರವಾಗಿ ನಿಂತಿರುವ ಪೊಲೀಸ್ ಠಾಣೆಯ ಸೀಸಿ ಕ್ಯಾಮರಾಗಳನ್ನು ಕೂಡಾ ಸಮಾಜ ಘಾತುಕರು ಕ್ಯಾರ್ ಮಾಡದಿರುವುದು ದೊಡ್ಡ ಸವಾಲಾಗಿದೆ. ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ಬ್ಲಾಕ್ ಕಾಂಗ್ರೆಸ್ ನಿಯೋಗವೊಂದು ಠಾಣೆಗೆ ತೆರಳಿದ್ದು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎ ರಶೀದ್ ದೂರು ನೀಡಿದ್ದಾರೆ.
k ale
k ale
loading...
No comments