Breaking News

ಹುತಾತ್ಮ ಯೋಧರ ಕುಟುಂಬಕ್ಕೆ 1.08 ಕೋಟಿ ರೂ. ನೆರವು ನೀಡಿದ ಅಕ್ಷಯ್‌


ಮುಂಬಯಿ: ಹುತಾತ್ಮ ಯೋಧರ ರ ಕುಟುಂಬಕ್ಕೆ ನೆರವು ನೀಡುವ ಪ್ರವೃತ್ತಿಯನ್ನು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಂದುವರಿಸಿದ್ದು, ಮಾರ್ಚ್‌ 11ರಂದು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಬಲಿಯಾಗಿರುವ ಸಿಆರ್‌ಪಿಎಫ್‌ನ ಹನ್ನೆರಡು ಯೋಧರ ಕುಟುಂಬಗಳಿಗೆ ತಲಾ ಒಂಬತ್ತು ಲಕ್ಷದಂತೆ ಅಕ್ಷಯ್‌ 1.08 ಕೋಟಿ ರೂ.ಗಳ ನೆರವು ನೀಡಿದ್ದಾರೆ.


ಅಕ್ಷಯ್‌ ಕುಮಾರ್‌ ಅವರು ತೆರೆಯಲ್ಲಿ ಅತ್ಯುತ್ತಮ ನಟರಾಗಿದ್ದರೆ ನಿಜ ಜೀವನದಲ್ಲಿ ಮಾನವೀಯತೆಯಿಂದ ಕೂಡಿರುವ ಒಳ್ಳೆಯ ಮನುಷ್ಯ ಎಂದು ಡಿಐಜಿ ಅಮಿತ್‌ ಲೋಧಾ ಹೇಳಿದ್ದಾರೆ. ಉರಿ ಸೇನಾ ನೆಲೆ ದಾಳಿ, ಅಸ್ಸಾಂನ ದಿಗ್‌ಬೊಯ್‌ ದಾಳಿಗಳಲ್ಲಿ ಮೃತಪಟ್ಟ ಯೋಧರ ಕುಟುಂಬಗಳಿಗೂ ಅಕ್ಷಯ್‌ ಕುಮಾರ್‌ ನೆರವಿನ ಹಸ್ತ ನೀಡಿದ್ದರು.



loading...

No comments