ಚಿತ್ರಮಂದಿರಗಳಲ್ಲಿ ಎಳನೀರು ಮಾರಾಟಕ್ಕೆ ಆದೇಶ
ಬೆಂಗಳೂರು : ರಾಜ್ಯದ ಮಲ್ಟಿಪ್ಲೆಕ್ಸ್ ಮತ್ತು ಚಲನಚಿತ್ರ ಮಂದಿರಗಳಲ್ಲಿ ಎಳನೀರು ಮಾರಾಟ ಮಾಡುವಂತೆ ಸುತ್ತೋಲೆ ಹೊರಡಿಸುವುದಾಗಿ ನಗರಾಭಿವೃದ್ದಿ ಮತ್ತು ಹಜ್ ಸಚಿವರ ಪರವಾಗಿ ಸಚಿವ ಪ್ರಕಾಶ್ ಖಂಡ್ರೆ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಎಳನೀರು ಮಾರಾಟ ಮಾಡದಂತೆ ಯಾವುದೇ ನಿರ್ಬಂಧ ಇಲ್ಲ. ರೈತರ ಹಿತ ದೃಷ್ಟಿಯಿಂದ ಎಳನೀರು ಮಾರಾಟ ಮಾಡುವಂತೆ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿತ್ರಮಂದಿರಗಳಲ್ಲಿ ತಂಪು ಪಾನೀಯಗಳನ್ನು ನಿಷೇಧಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಎಳನೀರು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
loading...
No comments