ಹಲ್ಮೆಟ್ ಧರಿಸಿಲ್ಲವೆಂದು ಕಪಾಲ ಮೋಕ್ಷ ಮಾಡಿದ ಮಹಿಳಾ SI
ಮಂಡ್ಯ: ಹೆಲ್ಮೆಟ್ ಧರಿಸದ ಇಬ್ಬರು ಯುವಕರನ್ನು ಮಹಿಳಾ ಪೊಲೀಸ್ ಅಧಿಕಾರಿ ಹಿಗ್ಗಾಮುಗ್ಗಾ ಥಳಿಸದ ಘಟನೆ ಮದ್ದೂರು ಬಳಿಯ ಸೋಮನಹಳ್ಳಿ ಗ್ರಾಮದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳಾ ಪೊಲೀಸ್ ಅಧಿಕಾರಿ 'ಸವಿ' ಅವರ ವರ್ತನೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ....
ಮಹಿಳಾ ಎಸ್‌ಐ ಸವಿ ಮತ್ತು ತಂಡ ಸಂಚಾರಿ ನಿಯಮನ ಉಲ್ಲಂಘಿಸುವ ವಾಹನಗಳ ತಪಾಸಣೆ ನಡೆಸಿದ್ದರು. ಈ ವೇಳೆ ಹಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಹೆಮ್ಮನಹಳ್ಳಿ ನಿವಾಸಿಗಳಾದ ನಾಗಸಿಂಹ ಮತ್ತ ನಿಶಾಂತ್ ಪೊಲೀಸ್ ಕಣ್ಣಿಗೆ ಬಿದ್ದರು. ಆದರೆ, ಪೊಲೀಸರು ಕಾನೂನಿನ ಪ್ರಕಾರ ದಂಡ ಕಟ್ಟಿಸಿಕೊಳ್ಳುವ ಬದಲು ಯುವಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಯುವಕರು ಪೊಲೀಸರ ನಡುವೆ ವಾಗ್ವಾದ ಶುರುವಾಗಿತ್ತು.
ಯುವಕರ ಪ್ರತ್ಯುತ್ತರದಿಂದ ಕೆಂಡಾಮಂಡಲವಾದ ಮಹಿಳಾ ಎಸ್‌ಐ ಯುವಕನನ್ನು ಎಳೆದು ಕವಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಗೆ ಕರೆದೊಯ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
-vk
loading...
No comments