Breaking News

ಶಾಲೆಗಳಲ್ಲಿ ಐಚ್ಚಿಕ ವಿಷಯವಾಗಿ ಅರೆಬಿಕ್ ಕಲಿಸಲು ಸರಕಾರ ನಿರ್ಧರಿಸಿದೆ : ಖಾದರ್


ಪುತ್ತೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಅರೆಬಿಕ್ ಬಾಷೆಯನ್ನು ಪಠ್ಯದಲ್ಲಿ ಐಚ್ಚಿಕ ವಿಷಯವಾಗಿ ಕಲಿಸಲು ಸರಕಾರ ನಿರ್ಧರಿಸಿದ್ದು, ಬಜೆಟ್ ಬಳಿಕ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಖಾದರ್, “ನಾವು ಯಾವುದೇ ಭಾಷೆಯನ್ನು ಕಲಿಯಬಹುದಾಗಿದೆ. ಭಾಷೆ ಬಾಂಧವ್ಯವನ್ನು ವೃದ್ಧಿಸುತ್ತದೆ. ಅರೆಬಿಕ್, ಸಂಸ್ಕøತ ಸೇರಿದಂತೆ ಇನ್ನಿತರ ಭಾಷೆಗಳನ್ನು ಕಲಿತರೆ ನಮ್ಮ ಜ್ಞಾನ ವೃದ್ಧಿಸಲು ಸಾಧ್ಯವಾಗುತ್ತದೆ. ವಿವಿಧ ಧರ್ಮ ಗ್ರಂಥಗಳು ವಿವಿಧ ಭಾಷೆಯಲ್ಲಿದ್ದು, ಅವುಗಳನ್ನು ತಿಳಿಯಬೇಕಾದರೆ ನಾವು ಆ ಭಾಷೆಯನ್ನು ಕಲಿಯಬೇಕಾಗುತ್ತದೆ. ಅರೆಬಿಕ್ ಕಲಿತರೆ ನಮ್ಮ ದೇಶದಿಂದ ಗಲ್ಫ್ ದೇಶಗಳಿಗೆ ಉದ್ಯೋಗಕ್ಕೆ ತೆರಳುವ ಮಂದಿಗೂ ಪ್ರಯೋಜನವಾಗಲಿದೆ. ಕಡ್ಡಾಯವಾಗಿ ಕಲಿಕೆಗೆ ಒತ್ತಡವಿಲ್ಲ, ಮನಸ್ಸಿದ್ದರೆ ಮಾತ್ರ ಕಲಿಯಬಹುದು, ಇದಕ್ಕಾಗಿ ಇದನ್ನು ಐಚ್ಚಿಕವಾಗಿ ಕಲಿಸಲು ತೀರ್ಮಾನಿಸಲಾಗಿದೆ” ಎಂದು ಖಾದರ್ ಹೇಳಿದರು.
loading...

No comments