Breaking News

ಮೋದಿ ಮೋಡಿ ಅಗತ್ಯವಿಲ್ಲ ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್'ಗೆ ಸೋಲುಂಟಾಗಲಿದೆ : ಪೂಜಾರಿ


ಮಂಗಳೂರು :ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ .ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು  ಮುಂದಿನ ತಿಂಗಳು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ-ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸುವ ಮುಂಚೆಯೇ ಪಕ್ಷದ ಹಿರಿಯ ನಾಯಕ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.ಉಪ ಚುನಾವಣೆಗೆ ಮೋದಿ ಮೋಡಿ ಅಗತ್ಯವಿಲ್ಲ, ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್'ಗೆ ಸೋಲುಂಟಾಗಲಿದೆ ಎಂದರು .

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ,ಅತಿ ಹೆಚ್ಚು ಸೀಟು ಪಡೆದಿದೆ ಹೇಳಿಕೊಳ್ಳುತ್ತಿದೆ ಹಾಗೆ ನೋಡಿದರೆ 1985 ರಲ್ಲಿ ಉತ್ತರ ಪ್ರದೇಶದಲ್ಲಿ  ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಎಲ್ಲಾ 411 ಸ್ಥಾನಗಳನ್ನು ಪಡೆದುಕೊಂಡಿತು ಎಂಬುದನ್ನು ಬಿಜೆಪಿ ಮರೆಯಬಾರದು ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು 
loading...

No comments