Breaking News

ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ

ಪಣಜಿ : ಮಾಜಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್  ೧೩ನೇ ಮುಖ್ಯ ಮಂತ್ರಿಯಾಗಿ   ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಗೋವಾ ಗವರ್ನರ್ ಮೃದುಲಾ ಸಿನ್ಹಾ ರಾಜ್ ಭವನದಲ್ಲಿ ಪರಿಕ್ಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಸತತ ಎರಡು ಬಾರಿ ಗೋವಾ ಮುಖ್ಯ ಮಂತ್ರಿ ಆಗಿ ಗೋವಾ ದಲ್ಲಿ ಬಿಜೆಪಿಯನ್ನು ಬಲಪಡಿಸಿದ ಕೀರ್ತಿ ಮನೋಹರ್ ಪರಿಕ್ಕರ್ ಅವರಿಗೆ ಸಲ್ಲುತ್ತದೆ .ಪರಿಕ್ಕರ್ ಅವರು ಯುವಕನಾಗಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದರು ಹಾಗು ಇವರು ಐಐಟಿ ಬಾಂಬೆ ಪದವೀಧರ ಕೂಡ ಅಗಿದ್ದರೆ.
ರಕ್ಷಣಾ ಮಂತ್ರಿಯಾಗಿದ್ದ  ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಸದೆ ಬಡಿಯುವಲ್ಲಿ ಪರಿಕ್ಕರ್ ಸಫಲವಾಗಿ  ಕದನ ವಿರಾಮ ಉಲ್ಲಂಘನೆ ರಕ್ಷಣಾ ವಿಚಾರದಲ್ಲಿ ಅಲ್ಪ ಸಮಯದಲ್ಲಿ ಮೈಲಿಗಲ್ಲು ಸಾಧಿಸಿದ ಕೀರ್ತಿ ಮನೋಹರ್ ಪರಿಕ್ಕರ್ ಅವರಿಗೆ ಸಲ್ಲುತ್ತದೆ .

loading...

No comments