ವಾಸು ಕೊಲೆ ಆರೋಪಿಗಳ ಬಂಧನಕ್ಕೆ ಬಿಜೆಪಿ ಆಗ್ರಹ
ಸಿಐಡಿ ತನಿಖೆಗೆ ಆಗ್ರಹ
ಬೆಂಗಳೂರು : – ಆನೇಕಲ್‌ನ ಪುರಸಭಾ ಸದಸ್ಯ ಹಾಗೂ ಬಿಜೆಪಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರ ಕೊಲೆ ರಾಜಕೀಯ ಕೊಲೆಯಾಗಿದ್ದು, ಸಂಜೆಯ ವೇಳೆಗೆ ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ರಾಜ್ಯ ಬಿಜೆಪಿ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ, ಶೂಟೌಟ್‌ಗಳು, ಕೊಲೆ, ಸುಲಿಗೆ ಅವ್ಯಾಹತವಾಗಿ ನಡೆದಿದೆ. ಕೇರಳ ಮಾದರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಮುಗಿಸುವ ಸಂಚು ರಾಜ್ಯದಲ್ಲೂ ನಡೆದಿದೆ. ಕರ್ನಾಟಕ, ಬಿಹಾರವಾಗಿದೆ. ಆನೇಕಲ್, ಬಿಹಾರವನ್ನೂ ಮೀರಿಸಿದೆ ಎಂದು ಮಾಜಿ ಸಚಿವ ನಾರಾಯಣಸ್ವಾಮಿ ಹರಿಹಾಯ್ದರು.ಘಟನೆಯನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
loading...
No comments