ವಾಚ್ ಪ್ರಕರಣ ಸೀಎಂಗೆ ಕ್ಲೀನ್ ಚಿಟ್ ನೀಡಿದ ಎಸಿಬಿ
ಬೆಂಗಳೂರು : ಸೀಎಂ ಸಿದ್ದರಾಮಯ್ಯರ ಹಬ್ಲೋಟ್ ಕೈಗಡಿಯಾರ ಪ್ರಕರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿರ್ಮೂಲನ ಬ್ಯೂರೋ (ಎಸಿಬಿ) ಸೀಎಂಗೆ ಕ್ಲೀನ್ ಚಿಟ್ ನೀಡಿದೆ.
ಲೋಕಾಯುಕ್ತ ಪೊಲೀಸ್ ಘಟಕ ರದ್ದುಗೊಳಿಸಿದ ಸೀಎಂ ಸಿದ್ದರಾಮಯ್ಯ 2016 ಮಾರ್ಚ್ 16ರಂದು ಎಸಿಬಿ ಅಸ್ತಿತ್ವಕ್ಕೆ ತಂದಿದ್ದರು. ಇದೀಗ ಇದಕ್ಕೆ ಸರಿಯಾಗಿ ಒಂದು ವರ್ಷವಾಗುತ್ತಲೇ ಸೀಎಂಗೆ ಪ್ರಕರಣವೊಂದರಲ್ಲಿ ಕ್ಲೀನ್ ಚಿಟ್ ನೀಡಿರುವುದು ಕುತೂಹಲದ ಸಂಗತಿಯಾಗಿದೆ.
70 ಲಕ್ಷ ರೂ ಬೆಲೆಬಾಳುವ ಸೀಎಂ ಕೈಗಡಿಯಾರ ರಹಸ್ಯ ಹೊರಗೆಡಹಲು ವಕೀಲ ನಟರಾಜ್ ಶರ್ಮ, ಆರ್ ಟಿ ಐ ಕಾರ್ಯಕರ್ತ ರಾಮಮೂರ್ತಿ ಗೌಡ ಮತ್ತು ಟಿ ಜೆ ಅಬ್ರಹಂ ಪ್ರತ್ಯೇಕ ದೂರರ್ಜಿ ನೀಡಿದ್ದರು.
“ಎಲ್ಲೂ ಮೂರು ದೂರುಗಳ ಪ್ರಾಥಮಿಕ ತನಿಖೆ ನಡೆಸಿದ್ದೇವೆ. ದುಬೈ ಮೂಲದ ಸೀಎಂ ಮಿತ್ರ ಡಾ ಗಿರೀಶ್‍ಚಂದ್ರ ವರ್ಮರ ಹೇಳಿಕೆ ಪಡೆದುಕೊಂಡಿದ್ದೇವೆ” ಎಂದು ಎಸಿಬಿ ಮೂಲಗಳು ಹೇಳಿವೆ.
ಲಭ್ಯವಿರುವ ದಾಖಲೆಯ ಪ್ರಕಾರ ಕೈಗಡಿಯಾರ ವರ್ಮರದೆಂದು ಸಾಬೀತಾಗಿದೆ. “ನಾನು ಸೀಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರು (ಸಿದ್ದರಾಮಯ್ಯ) ನನ್ನ ಕೈಗಡಿಯಾರದ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು. ಆಗ ನಾನು ಅದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದೇನೆ” ಎಂದು ಶರ್ಮ ಹೇಳಿದ್ದಾರೆಂದು ಎಸಿಬಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
loading...
No comments