Breaking News

ಬಿಜೆಪಿ ಕಡೆ ವಾಲುತಿರುವ ರಮ್ಯಾ ?


ಬೆಂಗಳೂರು : ಉಪಚುನಾವಣೆಯಲ್ಲಿ ಸಂಸತ್ತು ಪ್ರವೇಶಿ ಎಐಸಿಸಿ ಯಲ್ಲಿ ಸದ್ದು ಮಾಡಿದ ಸೆಲೆಬ್ರಿಟಿ ರಮ್ಯಾ ಕಳೆದ ಐದು ತಿಂಗಳಿಂದ  ರಾಜ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ರಮ್ಯಾರವರನ್ನು ರಾಜಕೀಯ ರಂಗಕ್ಕೆ ಕರೆ ತಂದ ಕಾಂಗ್ರೆಸ್ ಹಿರಿಯ ನಾಯಕ ಕಾಂಗ್ರೆಸ್ಸಿನಿಂದ ಮೊಲೆ ಗುಂಪು ಆಗಿ ನಾಳೆ ಬಿಜೆಪಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರುತ್ತಿದ್ದಾರೆ . ಎಸ್ ಎಂ ಕೃಷ್ಣ ತುಳಿದ ಹಾದಿಯಲ್ಲೇ ರಮ್ಯಾ ನಡೆಯಲ್ಲಿದ್ದಾರೆ ಎಂಬ ಸುದ್ದಿ  ಸಕ್ಕರೆ ನಾಡು ಮಂಡ್ಯದಲ್ಲಿ ಹಬ್ಬಿದೆ  ಮತ್ತು ಈ ಬಗ್ಗೆ ಯಾವುದೇ  ಅಧಿಕೃತವಾದ ಮಾಹಿತಿ ಈ ವರೆಗೆ ಹೊರ ಬಂದಿಲ್ಲ .

ಈ ನಡುವೆ ಮಂಡ್ಯ ಕೇಸರಿ ಪಡೆ ಈ ಎಲ್ಲಾ ಗಾಳಿ ಸುದ್ದಿಗೆ  ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ .ಒಂದು ವೇಳೆ ರಮ್ಯಾ ಬಿಜೆಪಿ ಸೇರಿದರೆ ಆತ್ಮಹತ್ಯೆ ಮಾಡಿಕೊಳ್ಳುತೇನೆ ಎಂದು ಸ್ಥಳೀಯ ಬಿಜೆಪಿ ಮುಖಂಡ ಮಂಜು ತಿರುಗೇಟು ನೀಡಿದ್ದಾರೆ . 


loading...

No comments