Breaking News

ಆರು ತಿಂಗಳ ಜಿಯೋ ಉಚಿತ ಸೇವೆಗೆ ಇನ್ನೂ ಮುಂದೆ ಹಣ ಕಟ್ಟಬೇಕು


ದೆಹಲಿ:- ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಜಿಯೋ ಸತತವಾಗಿ ಆರು ತಿಂಗಳು ನೆಟ್‌ವರ್ಕ್ ಸಮಸ್ಯೆ, ಕಾನೂನು ಸಮಸ್ಯೆಗಳನ್ನು ಎದುರಿಸಿದರೂ ಇಂದಿಗೆ 10 ಕೋಟಿ ಗ್ರಾಹಕರನ್ನು ಹೊಂದಿದೆ.!

ವರದಿ ಪ್ರಕಾರ ಭಾರತದಲ್ಲಿ 4G ಬಳಸುತ್ತಿರುವವರಲ್ಲಿ ಜಿಯೋ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿರುವ 16 ಕೋಟಿ ಬಳಕೆದಾರರಲ್ಲಿ ಈಗಾಗಲೇ 11 ಕೋಟಿಯಷ್ಟು ಜನರು ಜಿಯೋ ಪಾಲಾಗಿದ್ದಾರೆ.!! ಇನ್ನು ಮಾರ್ಚ್ 31 ರ ಒಳಗೆ ಜಿಯೋ ಬಳಕೆದಾರರೆಲ್ಲರೂ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕಿದ್ದು, ಒಂದು ವರ್ಷದ ಪ್ರೈಮ್ ರೀಚಾರ್ಜ್‌ಗೆ 99 ರೂ.ಮತ್ತು ಪ್ರತಿ ತಿಂಗಳು 303 ರೂಪಾಯಿಗೆ ಪ್ರತಿದಿನ ಒಂದು GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಸೇವೆಯನ್ನು ಪಡೆಯುತ್ತಾರೆ.! ಹಾಗಾಗಿ, ಜಿಯೋ ಪ್ರೈಮ್ ಆಫರ್ ಮೂಲಕವೇ ತನ್ನ ಆರು ತಿಂಗಳ ಉಚಿತ ಸೇವೆಯ ಶುಲ್ಕವನ್ನು ವಾಪಸ್ ತೆಗೆದುಕೊಳ್ಳುತ್ತಿದೆ.!! ಹೌದು, ಮಾಹಿತಿಯೊಂದರ ಪ್ರಕಾರ ಜಿಯೋ ನೀಡಿರುವ ಎಲ್ಲಾ ಸೇವೆಗಳ ಒಟ್ಟು ಮೊತ್ತ 1೦ ಸಾವಿರ ಕೋಟಿಯಷ್ಟೆ ಎನ್ನಲಾಗಿದೆ.!! ಟ್ರಾಯ್ ನಿಯಮದಂತೆ ಜಿಯೋ ಪ್ರಮೋಷನಲ್ ಆಫರ್ ಪಡೆದಿದ್ದು, ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಹಣ ರದ್ದು ಮತ್ತು ಇತರ 4G ಡೇಟಾ ಮತ್ತು ಕಾಲಿಂಗ್ ಶುಲ್ಕಗಳು ಸೇರಿ ಜಿಯೋ ಖರ್ಚು ಮಾಡಿರುವುದೇ 1೦ ಸಾವಿರ ಕೋಟಿ ರೂ. ಎನ್ನುವ ವರದಿಯೊಂದನ್ನು ಬ್ಯಸಿನೆಸ್ ಪತ್ರಕರ್ತರೊಬ್ಬರು ನೀಡಿದ್ದಾರೆ.!! ಈ ಹಣವನ್ನು ಜಿಯೋ ಕೇವಲ ಪ್ರೈಮ್ ಆಫರ್ 99 ರೂಪಾಯಿಗಳಿಂದಲೇ ವಾಪಸ್‌ ಪಡೆಯಲಿದ್ದು, ಮುಂದೆ ತನ್ನ ಬ್ಯುಸಿನೆಸ್ ಮುಂದುವರೆಸಲಿದೆ ಎಂದು ಹೇಳಲಾಗಿದೆ. ಸಾಮಾನ್ಯರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಿಳಿಯದ ಹಾಗೆ, ಜನರ ಮೂಗಿನ ಮೇಲಿದ್ದ ಬೆಣ್ಣೆಯನ್ನು ಬಾಯಿಗೆ ಹಾಕಿದ್ದಾರೆ ಅಂಬಾನಿ!! ಪ್ರಮುಖವಾಗಿ ಜಿಯೋ ಸರ್ಕಾರಕ್ಕೆ ತೆರಿಗ ಹಣ ತುಂಬಲು ಇನ್ನು ಆರು ತಿಂಗಳು ಸಮಯವಿದ್ದು, ಅಷ್ಟರವೇಳೆಗಾಗಲೇ 1,50,೦೦೦ ಕೋಟಿ ಬಂಡವಾಳ ಹಾಕಿರುವ ಜಿಯೋ ಲಾಭದ ಕಡೆಗೆ ಮುಖಮಾಡುತ್ತದೆ. ಇದರ ಜೊತೆಗೆ ಇನ್ನೊಂದು ಇಂಟರೆಸ್ಟಿಂಗ್ ಸುದ್ದಿ ಗೊತ್ತಾ? ಜಿಯೋ ಬ್ರಾಂಡ್ ಈಗಾಗಲೇ 20 ಸಾವಿರ ಕೋಟಿಗೂ ಹೆಚ್ಚು ಹೆಸರು ಮಾಡಿದೆ.
loading...

No comments